I Kill U.. ಐಸಿಸ್ ಉಗ್ರರಿಂದ ಟೀಮ್‌ ಇಂಡಿಯಾ ಕೋಚ್ ಗೌತಮ್‌ ಗಂಭೀರ್‌ಗೆ ಕೊಲೆ ಬೆದರಿಕೆ!

ದೆಹಲಿ : ಪಹಲ್ಗಾಮ್ ದಾಳಿ ಬೆನ್ನಲ್ಲೇ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೈ-ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಆತಂಕದ ನಡುವೆಯೇ ಟೀಮ್ ಇಂಡಿಯಾದ ಹೆಡ್​ ಕೋಚ್ ಗೌತಮ್ ಗಂಭೀರ್​ಗೆ ಕೊಲೆ ಬೆದರಿಕೆ ಬಂದಿದೆ.

ಹೌದು.. ಗೌತಮ್ ಗಂಭೀರ್ ಅವರಿಗೆ ಐಸಿಸ್ ಉಗ್ರ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದ್ದು, ಇ-ಮೇಲ್ ಸಂದೇಶದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದಾರೆ. ಅಲ್ಲದೇ ತಮ್ಮ ಕುಟುಂಬದ ಭದ್ರತೆ ಕೈಗೊಳ್ಳುವಂತೆ ಪೊಲೀಸರಿಗೆ ಗೌತಮ್ ಗಂಭೀರ್ ಮನವಿ ಮಾಡಿಕೊಂಡಿದ್ದಾರೆ.

ಮಾಹಿತಿಗಳ ಪ್ರಕಾರ, ಏಪ್ರಿಲ್ 22ರಂದು ಗೌತಮ್ ಗಂಭೀರ್‌ಗೆ ಇ-ಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದೆ. Islamic State ಕಾಶ್ಮೀರ ಘಟಕ ಎಂಬ ಹೆಸರಿನಡಿ ಮೇಲ್ ಬಂದಿವೆ.  ಒಂದು ಇ ಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ವೇಳೆ ಬಂದಿದೆ ಎಂದು ತಿಳಿದುಬಂದಿದೆ. ಎರಡೂ ಸಂದೇಶಗಳಲ್ಲೂ ಮೂರು ಪದ ಬಳಸಲಾಗಿದೆ. ‘I Kill U’ ಅಂತಾ ಮೇಲ್​ನಲ್ಲಿ ಬರೆಯಲಾಗಿದೆ. ಸದ್ಯ ಈ ಕುರಿತು ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬಹುನಿರೀಕ್ಷಿತ ‘ಎಕ್ಕ’ ಟೀಸರ್‌ ರಿಲೀಸ್.. ಪೊರಕೆ ಹಿಡಿದು ಡಿಫರೆಂಟ್‌ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟ ಯುವ ರಾಜ್‌ಕುಮಾರ್!‌

Btv Kannada
Author: Btv Kannada

Read More