ಬಹುನಿರೀಕ್ಷಿತ ‘ಎಕ್ಕ’ ಟೀಸರ್‌ ರಿಲೀಸ್.. ಪೊರಕೆ ಹಿಡಿದು ಡಿಫರೆಂಟ್‌ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟ ಯುವ ರಾಜ್‌ಕುಮಾರ್!‌

ಕನ್ನಡ ಚಿತ್ರರಂಗದ ಭರವಸೆ ನಾಯಕ ಯುವ ರಾಜ್‌ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಯುವ ಅಭಿನಯದ ‘ಎಕ್ಕ’ ಸಿನಿಮಾದ ಟೀಸರ್‌ ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್‌ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್‌ ಆಗಿಯೇ ‘ಎಕ್ಕ’ ಟೀಸರ್‌ ರಿಲೀಸ್‌ ಆಗಿದೆ.

1 ನಿಮಿಷ 9 ಸೆಕೆಂಡ್‌ ಇರುವ ಟೀಸರ್‌ ಸೈಕ್‌ ಆಗಿದೆ. ಹೊಸ ಅವತಾರದಲ್ಲಿ ಯುವ ರಾಜ್‌ಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಮಗು-ಮೃಗ ಅಂತಾ ಮಸ್ತ್‌ ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.

ಯುವ ಆಕ್ಟಿಂಗ್‌, ರೋಹಿತ್‌ ಪದಕಿ ಟೇಕಿಂಗ್‌, ಚರಣ್‌ ರಾಜ್‌ ಮ್ಯೂಸಿಕ್‌ ಕಿಕ್‌ ಟೀಸರ್‌ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಯುವ ಟೈಟಲ್‌ ಟ್ರ್ಯಾಕ್‌ ಚಿಂದಿ ಉಡಾಯಿಸಿದ್ದು, ಈಗ ಟೀಸರ್‌ ಸರದಿ ಅಂತಾ ಫ್ಯಾನ್ಸ್‌ ಖುಷಿಪಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವ ರಾಜ್‌ಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍ ಕುಮಾರ್ ಸಂಕಲನ ಒದಗಿಸಿದ್ದಾರೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಜೂನ್-6 ರಂದು ‘ಎಕ್ಕ’ ಸಿನಿಮಾ ತೆರೆಗೆ ಎಂಟ್ರಿ ಕೊಡುತ್ತಿದೆ.

ಇದನ್ನೂ ಓದಿ : ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಂಪುಟ ಸಭೆ – 25ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ಸಾಧ್ಯತೆ!

Btv Kannada
Author: Btv Kannada

Read More