ಹೈದರಾಬಾದ್‌ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್​ನಲ್ಲಿ 3ನೇ ಸ್ಥಾನಕ್ಕೇರಿದ ಮುಂಬೈ!

ಹೈದರಾಬಾದ್‌ : ಸನ್‌ರೈಸರ್ಸ್ ಹೈದರಾಬಾದ್‌ ತಂಡ ತನ್ನ ತವರಿನಲ್ಲಿ ಮತ್ತೊಂದು ಸೋಲನುಭವಿಸಿದೆ. ತನ್ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಿದ್ದ ಸನ್‌ರೈಸರ್ಸ್ 7 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 20 ಓವರ್​ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ತಂಡದ ಪರ ಕ್ಲಾಸೆನ್ 71 ರನ್ ಮತ್ತು ಅಭಿನವ್ 43 ರನ್ ಗಳಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ನಾಲ್ಕು ವಿಕೆಟ್ ಪಡೆದರೆ, ದೀಪಕ್ ಚಹಾರ್ ಎರಡು ವಿಕೆಟ್ ಪಡೆದರು.

ಈ ಅಲ್ಪ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕದ ನೆರವಿನಿಂದ ಇನ್ನು 26 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಈ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಮುಂಬೈ ತಂಡ 3ನೇ ಸ್ಥಾನಕ್ಕೆ ಏರಿದೆ.

ಇದನ್ನೂ ಓದಿ : ಪಾಕ್ ಸರ್ವನಾಶಕ್ಕೆ ರೆಡಿಯಾಗ್ತಿದೆ ಬಿಗ್​​ ಸ್ಕೆಚ್​​- ಪ್ರಧಾನಿ ಮೋದಿ ನಿವಾಸದಲ್ಲಿ ಭದ್ರತಾ ಸಮಿತಿ ಮೆಗಾ ಮೀಟಿಂಗ್​!

Btv Kannada
Author: Btv Kannada

Read More