36 ಲಕ್ಷ ಹೋಮ್​ ಲೋನ್​ಗೆ ಮೂರೇ ವರ್ಷದಲ್ಲಿ 53 ಲಕ್ಷ ವಸೂಲಿ – BTVಯಲ್ಲಿ ಮುಂಬೈ ಮೂಲದ IIFL ಕಂಪನಿ ಕರ್ಮಕಾಂಡ ರಿವೀಲ್!

ಬೆಂಗಳೂರು : ಶಿವಾಜಿನಗರದಲ್ಲಿ ಬ್ರ್ಯಾಂಚ್ ಹೊಂದಿರೋ ಮುಂಬೈ ಮೂಲದ IIFL ಫೈನಾನ್ಸ್ ಕಂಪನಿಯ ವಂಚನೆ ಕರ್ಮಕಾಂಡ ಬಟಾಬಯಲಾಗಿದೆ. ಹೌದು.. ಉದ್ಯಮಿ ಕೆ. ವಿಶ್ವನಾಥ್ ಎಂಬವರು 2021ರಲ್ಲಿ IIFL ಕಂಪನಿಯಿಂದ 36 ಲಕ್ಷ ಹೋಮ್​ ಲೋನ್ ಪಡೆದಿದ್ದರು. ಆದ್ರೆ, IIFL ಕಂಪನಿಯವರು ಮಂಜೂರಾದ 36 ಲಕ್ಷದಲ್ಲಿ ಕೈಗೆ ಕೊಟ್ಟಿದ್ದು 34 ಲಕ್ಷದ 11,000 ರೂ ಮಾತ್ರ. ಅದಲ್ಲದೇ ಕೇವಲ 3 ವರ್ಷದಲ್ಲಿ ಅಸಲು-ಬಡ್ಡಿ ಅಂತ 54 ಲಕ್ಷ ಕಟ್ಟಿಸಿಕೊಂಡಿದ್ದಾರೆ.

ಇದನ್ನ ಹೋಗಿ ವಿಶ್ವನಾಥ್ ಅವರು ಪರಿಶೀಲಿಸಿದಾಗ್ಲೇ 22% ಬಡ್ಡಿ ಹಾಕ್ತಿದ್ದಾರೆ ಎಂಬ IIFL ವಂಚನೆ ಕರ್ಮಕಾಂಡ ಬಯಲಿಗೆ ಬಂದಿದೆ. ಆ ಬಳಿಕ ವಿಶ್ವನಾಥ್​ ಇವರ ಸಹವಾಸ ಬೇಡ ಎಂದು ಅವಧಿಗೆ ಮುನ್ನವೇ ಲೋನ್ ತೀರಿಸಿದ್ದರು. ಇನ್ನು ಅವಧಿಗೆ ಮುನ್ನ ಮುಕ್ತಾಯ ಮಾಡಿದ್ದಕ್ಕೆ IIFLನವರು ವಿಶ್ವನಾಥ್​ಗೆ 6 ಲಕ್ಷ ಫೈನ್  ಕೂಡ ಹಾಕಿದ್ದಾರೆ.

ಒಮ್ಮೆ ಮುಕ್ತಿ ಸಿಗ್ಲಿ ಅಂತ ಒಪ್ಪಿಕೊಂಡ್ರೆ, ದಾಖಲೆ ಕೊಡದೆ ಆಟ ಆಡ್ತಿಸ್ತಿದ್ದಾರೆ. ನಾವು ಹೇಳಿದ ಹಾಗೆ ಬರೆದುಕೊಟ್ಟರೆ ಮಾತ್ರ ಡಾಕ್ಯುಮೆಂಟ್ ಕೊಡ್ತೀವಿ ಆಂತಿದ್ದಾರೆ ಎಂದು ಉದ್ಯಮಿ ಕೆ. ವಿಶ್ವನಾಥ್ ಅವರು ಬಿಟಿವಿ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಉದ್ಯಮಿ ಕೆ. ವಿಶ್ವನಾಥ್
ಉದ್ಯಮಿ ಕೆ. ವಿಶ್ವನಾಥ್

ಈ ವಿಚಾರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. “ಪೊಲೀಸರೇ ಇಂತಹ ಫ್ರಾಡ್ ಫೈನಾನ್ಸ್ ಕಂಪನಿಗಳನ್ನು ಸುಮ್ನೆ ಬಿಡ್ಬೇಡಿ. ಇಂಥಾ ಫ್ರಾಡ್​​ಗಳನ್ನು ನೋಡಿಕೊಂಡು ಹೇಗೆ ಸುಮ್ಮನಿದ್ದೀರಿ? Take action.. ಫೈನಾನ್ಸ್ ಕಂಪನಿ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ, ಡಬಲ್ ಡಬಲ್ ಹಣ ವಸೂಲಿ ಮಾಡುವ IIFL ಫೈನಾನ್ಸ್ ಕಂಪನಿಯನ್ನು ಕೂಡಲೇ ಬಂದ್ ಮಾಡ್ಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಪಹಲ್ಗಾಮ್ ಪ್ರವಾಸಿಗರ ನರಮೇಧ – AK 47 ಗನ್ ಹಿಡಿದ ಓರ್ವ ಭಯೋತ್ಪಾದಕನ ಫೋಟೋ ರಿವೀಲ್!

Btv Kannada
Author: Btv Kannada

Read More