ಗೋಲ್ಡ್ ಸ್ಮಗ್ಲಿಂಗ್ ರಾಣಿ ನಟಿ ರನ್ಯಾ ರಾವ್​​ಗೆ ಜೈಲೇ ಗತಿ – ಜಾಮೀನು ತೀರ್ಪು ಆದೇಶ ಕಾಯ್ದಿರಿಸಿದ ಹೈಕೋರ್ಟ್!

ಕೋಟಿ ಕೋಟಿ ಮೌಲ್ಯದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ನಟಿ ರನ್ಯಾ ರಾವ್​ಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ. ತಮಗೆ ಜಾಮೀನು ನೀಡುವಂತೆ ನಟಿ ರನ್ಯಾ ರಾವ್​ ಸಲ್ಲಿಸಿದ್ದ ಅರ್ಜಿಯ ತೀರ್ಪು ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಲ್ಲಿ ನಟಿ ರನ್ಯಾ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ವಾದ – ಪ್ರತಿವಾದ ಆಲಿಸಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ್ದಾರೆ. ರನ್ಯಾ ಪರವಾಗಿ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದ್ದು DRI ಪರವಾಗಿ ಮಧು ಎಂಬುವವರು ವಾದ ಮಂಡನೆ ಮಾಡಿದ್ರು.

ನಟಿ ರನ್ಯಾ ಪರವಾಗಿ ಸಂದೇಶ ಚೌಟ ವಾದ ಮಂಡಿಸಿದ್ದು ಮ್ಯಾಜಿಸ್ಟ್ರೇಟ್‌, ಸತ್ರ ನ್ಯಾಯಾಲಯ ಹಾಗೂ ಹೈಕೋರ್ಟ್‌ ಮುಂದೆ ವಿಭಿನ್ನ ದಾಖಲೆಗಳನ್ನು ಸಲ್ಲಿಸಲಾಗಿದೆ. ಇದನ್ನ ನ್ಯಾಯಾಲಯ ಪರಿಗಣಿಸಬೇಕು. ಡಿಕ್ಲರೇಷನ್‌ ಆಧರಿಸಿ ಕಸ್ಟಮ್ಸ್‌ ಸುಂಕ ವಿಧಿಸಲಾಗದು. ರನ್ಯಾ ಅವರು ಯಾವುದೇ ವಿಚಾರವನ್ನು ಬಚ್ಚಿಟ್ಟಿಲ್ಲ. ಇದಕ್ಕಾಗಿ ರನ್ಯಾ ಅವರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಬಹುದು ಎಂದ್ರು.

ಇನ್ನು ನಟಿ ರನ್ಯಾಗೆ ಗ್ರೀನ್‌ ಚಾನಲ್‌ ಸೌಲಭ್ಯ ಕಲ್ಪಿಸಿದ್ದೇಕೆ. ಇದು ಅತ್ಯಂತ ಪ್ರಮುಖ ವಿಚಾರ. ಇದಕ್ಕೆ ಉತ್ತರಿಸಬೇಕಾಗಿದೆ. ರನ್ಯಾ ವಿರುದ್ದ ದಾಖಲಿಸಿರುವ ಸೆಕ್ಷನ್‌ಗಳಿಗೆ ಗರಿಷ್ಠ 7 ವರ್ಷ ಶಿಕ್ಷೆಯಾಗಲಿದ್ದು, ಸದ್ಯ 49 ದಿನದಿಂದ ಜೈಲಿನಲ್ಲಿದ್ದಾರೆ. ಹೀಗಾಗಿ ರನ್ಯಾ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲ ಸಂದೇಶ ಚೌಟ ವಾದ ಮಂಡಿಸಿದ್ರು.

ವಾದ – ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದೆ. ಸದ್ಯಕ್ಕೆ ನಟಿ ರನ್ಯಾ ರಾವ್​ಗೆ ಜೈಲೇ ಗತಿಯಾಗಿದೆ.

ಇದನ್ನೂ ಓದಿ : ಜಮ್ಮು & ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿ – ಸಿಎಂ ಸಿದ್ದರಾಮಯ್ಯ ತುರ್ತು ಸಭೆ.. ಕಾಶ್ಮೀರಕ್ಕೆ ಹೊರಟ ಅಧಿಕಾರಿಗಳ ಟೀಂ!

Btv Kannada
Author: Btv Kannada

Read More

Read More