ಬೆಂಗಳೂರು : ಕನ್ನಡಿಗನ ಮೇಲೆಯೇ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಎಂದು ಕಥೆ ಕಟ್ಟಿದ್ದ ರೌಡಿ ಅಧಿಕಾರಿ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಈ ಮೂಲಕ ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ನಡೆದ ರೋಡ್ ರೇಜ್ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಪೊಲೀಸರು ಇದೀಗ ಕನ್ನಡಿಗರ ಹೆಸರಿಗೆ ಕಪ್ಪು ಮಸಿ ಬಳಿದ ವಿಂಗ್ ಕಮಾಂಡರ್ ವಿರುದ್ಧವೇ ಹತ್ಯಾ ಪ್ರಯತ್ನ ಕೇಸ್ ದಾಖಲಿಸಿದ್ದಾರೆ.
ಸದ್ಯ ಶಿಲಾದಿತ್ಯ ಬೋಸ್ ಮೇಲೆ ಕನ್ನಡಿಗನಿಂದ ಹಲ್ಲೆ ನಡೆದಿದೆ ಎಂಬ ಸುಳ್ಳು ವಿಚಾರ ಅಂತರಾಷ್ಟ್ರಿಯ ಮಟ್ಟದಲ್ಲಿ ಸುದ್ದಿ ಆಗಿದೆ. ಈ ಮೊದಲು ರೋಡ್ ರೇಜ್ಗೆ ಕನ್ನಡ ಭಾಷೆಯ ವಿಚಾರ ಎನ್ನುವ ಬಣ್ಣ ಹಚ್ಚಲಾಗಿತ್ತು. ಆದ್ರೆ ಇದೀಗ ಕನ್ನಡ ವಿರೋಧಿ ಅಧಿಕಾರಿಯ ಸುಳ್ಳಿನ ಆಟ ಸಿಸಿಟಿವಿಯಲ್ಲಿ ಇಂಚಿಚೂ ಬಯಲಾಗಿದೆ.
ಕೂಡಲೇ ರೌಡಿ ಅಧಿಕಾರಿ ಶಿಲಾದಿತ್ಯನನ್ನು ಬಂಧಿಸಿ : ಕರ್ನಾಟಕದಾದ್ಯಂತ ಸಿಡಿದೆದ್ದ ಕನ್ನಡಿಗರು, ರೌಡಿ ಅಧಿಕಾರಿ ಶಿಲಾದಿತ್ಯ ಬೋಸ್ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರ ಹೆಸರಿಗೆ ಕಪ್ಪು ಮಸಿ ಬಳಿದ ರೌಡಿ ಅಧಿಕಾರಿಯನ್ನು ಈ ಕೂಡಲೇ ಬಂಧಿಸಬೇಕೆಂದು ರಾಜ್ಯಾದ್ಯಂತ ಕನ್ನಡಪರ ಹೋರಾಟಗಾರು ಆಗ್ರಹಿಸಿದ್ದಾರೆ.
ಇಡೀ ಕಾರ್ನಟಕವೇ ಉತ್ತರ ಭಾರತ ಮೂಲದ ರೌಡಿ ಅಧಿಕಾರಿ ಶಿಲಾದಿತ್ಯ ಬೋಸ್ನ ಬಂಧನ ಯಾವಗ ಎಂದು ಕೇಳುತ್ತಿದೆ. ಶಿಲಾದಿತ್ಯ ಬೋಸ್ ಹಾಗೂ ಆತನ ಹೆಂಡ್ತಿ ಹೇಳಿದ್ದನ್ನ ನಿಜ ಅಂತಾ ನಂಬಿದ ಪೊಲೀಸರು, ಕನ್ನಡದ ಯುವಕನ ಮೇಲೆ ನಿನ್ನೆ ಕೇಸ್ ದಾಖಲಿಸಿ ತಕ್ಷಣವೇ ಬಂಧಿಸಿದ್ರು. ಈಗ ಹಿಂದಿ ಆಫೀಸರ್ ಮಾಡಿರೋ ಸುಳ್ಳಿನ ನಾಟಕ ಒಂದೊಂದೆ ಬಯಲಾಗಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕನ್ನಡಿಗರು ಗೂಂಡಾಗಳೆಂದು ಬಿಂಬಿಸಲು ಯತ್ನಿಸಿದ ರೌಡಿ ಶಿಲಾದಿತ್ಯ ಬೋಸ್, ಕನ್ನಡಿಗರ ಜಾಗವೆಂದು ಬೆದರಿಸಿ ಹೊಡೆದರು ಎಂದು ಆರೋಪಿಸಿದ್ದ. ಇಷ್ಟೆಲ್ಲಾ ಸುಳ್ಳಾಟ ಆಡಿದ್ದ ರೌಡಿ ಅಧಿಕಾರಿ ಶಿಲಾದಿತ್ಯ ಹಾಗೂ ಆತನ ಪತ್ನಿಯನ್ನ ಇನ್ನು ಯಾಕೆ ಬಂಧಿಸಿಲ್ಲ? ಎಂದು ಕನ್ನಡಿರು ಕೇಳುತ್ತಿದ್ದಾರೆ.
ಇನ್ನು ಶಿಲಾದಿತ್ಯ ಬೋಸ್ ಮಾಡಿದ್ದ ವೀಡಿಯೋದಲ್ಲಿ ಅವರ ಹಣೆಯಿಂದ ರಕ್ತ ಕೂಡ ಸೋರುತ್ತಿತ್ತು. ಯುವಕ ವಿಕಾಸ್ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಈ ರೀತಿಯಾಗಿದೆ ಎಂದು ಶಿಲಾದಿತ್ಯ ವಿಡಿಯೋದಲ್ಲಿ ಬಿಂಬಿಸಿದ್ದರು. ಆದರೆ ಇದರ ಅಸಲಿ ಕಾರಣವೇ ಬೇರೆ ಇದೆ. ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋಗಿ ಶಿಲಾದಿತ್ಯ ಹಣೆಯಲ್ಲಿ ರಕ್ತ ಬರಿಸಿಕೊಂಡಿದ್ದಾರೆ.
ಗಲಾಟೆ ನಡೆದ ಸಂದರ್ಭ ವಿಂಗ್ ಕಮಾಂಡರ್ ಬೈಕ್ ಅನ್ನು ಬೀಳಿಸಿದ್ದಾರೆ. ಈ ವೇಳೆ ವಿಕಾಸ್ ಬೈಕ್ ಕೀಯನ್ನು ಬೈಕಿನಿಂದ ತೆಗೆದು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ರೊಚ್ಚಿಗೆದ್ದ ಶಿಲಾದಿತ್ಯ ವಿಕಾಸ್‌ಗೆ ಡಿಚ್ಚಿ ಹೊಡೆಯಲು ಹೋದ ಸಂದರ್ಭ ವಿಕಾಸ್ ಕೈಯಲ್ಲಿದ್ದ ಗಾಡಿ ಕೀ ಹಣೆಗೆ ತಗುಲಿ ರಕ್ತ ಬಂದಿದೆ. ಇದನ್ನೇ ಸಿಂಪತಿ ವೀಡಿಯೋಗೆ ಬಳಸಿಕೊಂಡ ರೌಡಿ ಅಧಿಕಾರಿ ಶಿಲಾದಿತ್ಯ, ದೇವರು ನನಗೆ ಪವರ್ ಕೊಟ್ಟಿರೋದು ಸೇಡು ತೀರಿಸಿಕೊಳ್ಳಲು ಅಲ್ಲ ವಿಡಿಯೋದಲ್ಲಿ ಎಂದು ಸುಳ್ಳು ಹೇಳಿದ್ದಾರೆ.
ಸದ್ಯ ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ಶಿಲಾದಿತ್ಯ ಬೋಸ್ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 109, 115(2), 304, 324, 352 ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಆದ್ರೆ ಕೂಡಲೇ ರೌಡಿ ಅಧಿಕಾರಿ ಶಿಲಾದಿತ್ಯ ಬೋಸ್ ನನ್ನ ಬಂಧಿಸಿ ಜೈಲಿಗಟ್ಟುವ ಕೆಲಸವಾಗಬೇಕಷ್ಟೇ.
ಇದನ್ನೂ ಓದಿ : ನಿವೃತ್ತ DG-IGP ಓಂ ಪ್ರಕಾಶ್ ಹತ್ಯೆ ಕೇಸ್ – ಆರೋಪಿ ಪತ್ನಿಗೆ 14 ದಿನ ನ್ಯಾಯಾಂಗ ಬಂಧನ!
