ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್ – ವಿಂಗ್ ಕಮಾಂಡರ್​ನ ಅಸಲಿ ಬಣ್ಣ ಬಯಲು.. ಸಿಡಿದೆದ್ದ ಕನ್ನಡಿಗರು!

ಬೆಂಗಳೂರು : ಕನ್ನಡಿಗನ ಮೇಲೆಯೇ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಎಂದು ಕಥೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಬಯಲಾಗಿದೆ. ಶಿಲಾದಿತ್ಯ ಬೋಸ್ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡ್ತಿರುವ ಸಿಸಿಟಿವಿ ದೃಶ್ಯ ಹೊರಬೀಳುತ್ತಿದ್ದಂತೆ ವೀರ ಕನ್ನಡಿಗರು ಸಿಡಿದೆದ್ದಿದ್ದಾರೆ.

ವಿಂಗ್​ ಕಮಾಂಡರ್​​ ಶಿಲಾದಿತ್ಯ ಬೋಸ್ ಹಾಗೂ ಆತನ ಸತ್ಯವಂತ ಹೆಂಡ್ತಿ ಹೇಳಿದ್ದನ್ನ ನಿಜ ಅಂತಾ ನಂಬಿದ ಪೊಲೀಸರು, ಕನ್ನಡದ ಯುವಕನ ಮೇಲೆ ಕೇಸ್​ ದಾಖಲಿಸಿ, ಆತನನ್ನು ಬಂಧಿಸಿದ್ದರು. ಈಗ ಹಿಂದಿ ಆಫೀಸರ್​ ಮಾಡಿರೋ ಸುಳ್ಳಿನ ನಾಟಕ ಸಿಸಿಟಿವಿಯಲ್ಲಿ ಬಟಾ ಬಯಲಾಗಿದೆ. ಈ ಮೂಲಕ IAF ವಿಂಗ್ ಕಮಾಂಡರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, CCTV ಪರಿಶೀಲಿಸಿದಾಗ ವಿಂಗ್ ಕಮಾಂಡರ್ ಹಲ್ಲೆ ಮಾಡಿರೋದು ಪತ್ತೆಯಾಗಿದೆ. ತಾನೇ ಹೊಡೆದು ಕನ್ನಡಿಗರನ್ನು ರೌಡಿಗಳೆಂದು ಬಿಂಬಿಸಲು ವಿಂಗ್ ಕಮಾಂಡರ್ ಯತ್ನಿಸಿದ್ದಾನೆ.

ಹೌದು.. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕನ್ನಡಿಗರು ಗೂಂಡಾಗಳೆಂದು ಬಿಂಬಿಸಲು ಯತ್ನಿಸಿದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ಕನ್ನಡಿಗರ ಜಾಗವೆಂದು ಬೆದರಿಸಿ ಹೊಡೆದರು ಎಂದು ಆರೋಪಿಸಿದ್ದಾನೆ. ಈಗ ನೋಡಿದರೆ, ಅವನೇ ಬಡ ಕನ್ನಡಿಗನಿಗೆ ಹೊಡೆದಿರೋದು ಬಯಲಾಗಿದೆ. CCTV ಸಾಕ್ಷಿ ಇದ್ದರೂ ಶಿಲಾದಿತ್ಯ ಮೇಲೆ ಪೊಲೀಸರು FIR ದಾಖಲಿಸಿಲ್ಲ. ಕನ್ನಡಿಗ ನಿರಪರಾಧಿ ವಿಕಾಸ್ ಮೇಲೆ ಪೊಲೀಸರಿಂದ ತಕ್ಷಣವೇ FIR ಮಾಡಿದ್ದಾರೆ.

ಈ ವಿಚಾರ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ರಾತ್ರಿಪೂರ್ತಿ ಬೈಯ್ಯಪ್ಪನಹಳ್ಳಿ ಠಾಣೆ ಮುಂದೆ ಕನ್ನಡ ಸಂಘಟನೆಗಳು ಪ್ರೊಟೆಸ್ಟ್ ನಡೆಸಿವೆ. ಕನ್ನಡಿಗ ವಿಕಾಸ್​ಗೆ ಬೆನ್ನೆಲುಬಾಗಿ ನಿಂತು ರಾತ್ರಿ ಇಡೀ ಕನ್ನಡಿಗರು ಪ್ರತಿಭಟನೆ ಮಾಡಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೇ ರಕ್ಷಣೆ ಇಲ್ವಾ? ವಿಂಗ್ ಕಮಾಂಡರ್ ಆದ್ರೂ ಅಷ್ಟೇ, ಮೊದ್ಲು FIR ಹಾಕಿ ಅರೆಸ್ಟ್ ಮಾಡಿ ಎಂದು ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಹೋರಾಟಗಾರರು FIR ದಾಖಲಿಸಲು ಹಠ ಹಿಡಿದಿದ್ದಾರೆ.

ವೀರ ಕನ್ನಡಿಗರೇ ಎದ್ದೇಳಿ, ಇನ್ನೂ ಸುಮ್ಮನಿದ್ರೆ ಆಗಲ್ಲ. ಬೆಂಗಳೂರಿನಲ್ಲಿ ವಲಸಿಗರ ದೌರ್ಜನ್ಯ ಲೆಕ್ಕಕ್ಕಿಂತ ಜಾಸ್ತಿಯಾಯ್ತು. ಲಿಮಿಟ್ ಮೀರಿ ವರ್ತಿಸೋ ಅನ್ಯಭಾಷಿಕರಿಗೆ ಬುದ್ಧಿ ಕಲಿಸ್ಲೇ ಬೇಕು ಎಂದು ಸಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಕರಣ ಏನು? ಕಾರಿಗೆ ಬೈಕ್ ಹಿಂದಿನಿಂದ ಟಚ್ ಆಗಿದ್ದಕ್ಕೆ ಗಲಾಟೆಯಾಗಿದೆ ಎನ್ನಲಾಗಿತ್ತು. ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ, ‘ಬೈಕ್ ಸವಾರ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಕನ್ನಡ ಮಾತನಾಡಿಲ್ಲ ಎಂದು ಹಲ್ಲೆ ಮಾಡಿದ. ನನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಈ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ. ಸ್ಥಳೀಯರು ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ’ ಎಂದು ವಿಂಗ್ ಕಮಾಂಡರ್ ಆರೋಪ ಮಾಡಿದ್ದರು. ತಲೆಗೆ ಮತ್ತು ಮೂಗಿನ ಭಾಗಕ್ಕೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಹಾಕಿಸಿದ್ದರು. ಆದರೆ, ಹಲ್ಲೆಗೆ ಸಂಬಂಧಿಸಿದ ವೀಡಿಯೋ ಈಗ ಬಿಟಿವಿಗೆ ಲಭ್ಯವಾಗಿದ್ದು, ವಿಂಗ್ ಕಮಾಂಡರ್ ಅಸಲಿಯತ್ತು ಬಯಲಾಗಿದೆ. ವೀಡಿಯೋದಲ್ಲಿ ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ.

ಇದನ್ನೂ ಓದಿ : ಡಾನ್ ಮುತ್ತಪ್ಪ ರೈ 2ನೇ ಪತ್ನಿ ಅಮೆರಿಕಕ್ಕೆ ಎಸ್ಕೇಪ್​​ – ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧ!

Btv Kannada
Author: Btv Kannada

Read More