ನವದೆಹಲಿ : ಬಂಗಾರ ದಿನದಿಂದ ದಿನಕ್ಕೆ ಗ್ರಾಹಕರ ಕೈ ಸುಡುತ್ತಿದೆ. ಹಳದಿ ಲೋಹವನ್ನು ಮುಟ್ಟುವುದೇ ಬೇಡ ಎನ್ನುವಷ್ಟು ದರ ಹೆಚ್ಚಳವಾಗಿದೆ. ಸದ್ಯ ಇದೀಗ ದೆಹಲಿಯಲ್ಲಿ ಚಿನ್ನದ ಬೆಲೆಯೂ ಮತ್ತೆ 1,650 ರೂಪಾಯಿ ಏರಿಕೆಯಾಗಿದ್ದು, 1 ಲಕ್ಷ ರೂಪಾಯಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.
ಅಖಿಲ ಭಾರತ ಸರಾಫಾ ಸಂಘದ (ಎಐಎಸ್ಐ) ನಂತೆ ದೆಹಲಿಯಲ್ಲಿ ಶೇಕಡಾ 99.9 ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 99,800 ರೂಪಾಯಿ ಆಗಿದೆ. ಕಳೆದ ಶುಕ್ರವಾರ ಇದರ ಬೆಲೆಯಲ್ಲಿ 20 ರೂಪಾಯಿ ಕಡಿಮೆಯಾಗಿ 10 ಗ್ರಾಂ ಚಿನ್ನಕ್ಕೆ 98,150 ರೂಪಾಯಿ ಇತ್ತು. ಆದರೆ ಇದೀಗ ಏಕಾಏಕಿ 1,650 ರೂಪಾಯಿ ಏರಿಕೆ ಆಗಿದ್ದರಿಂದ ಬಂಗಾರವೂ 1 ಲಕ್ಷ ರೂಪಾಯಿ ತಲುಪಲು ಕೇವಲ 200 ರೂಪಾಯಿ ಮಾತ್ರ ಬೇಕಿದೆ ಅಷ್ಟೇ.
ಬಂಗಾರವು ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂಗೆ 99,300 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆ ಆಗಿರುವುದು ಗ್ರಾಹಕರಿಗೆ ಇನ್ನಷ್ಟು ಬೇಸರದ ಸಂಗತಿ ಎನ್ನಬಹುದು. ಪ್ರತಿ ಕೆಜಿ ಸಿಲ್ವರ್ಗೆ 500 ರೂಪಾಯಿ ಏರಿಕೆಯಾಗಿದ್ದು ಈಗ 98,500 ರೂಪಾಯಿಗೆ ತಲುಪಿದೆ. ಏಪ್ರಿಲ್ 18 ರಂದು ಬೆಳ್ಳಿ ಬೆಲೆ ಕೆಜಿಗೆ 98,000 ರೂಪಾಯಿ ಇತ್ತು. ಆದರೆ ಇದರಲ್ಲೂ ದರ ಏರಿಕೆ ಆಗಿದೆ ಎಂದು ಹೇಳಲಾಗಿದೆ.
ವಿಶ್ವದ ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಸೊನಾಲ್ಡ್ ಟ್ರಂಪ್ ಅವರು ಅಧಿಕ ಸುಂಕ ವಿಧಿಸಿದ್ದರಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತ ಹೋಗುತ್ತಿದೆ. ಚೀನಾ ಹಾಗೂ ಅಮೆರಿಕದ ನಡುವೆ ಈಗಲೂ ತೆರಿಗೆ ಯುದ್ಧ ನಡೆಯುತ್ತಿದೆ. ಇದರಿಂದ ಡಾಲರ್ ಬೆಲೆ ಕುಸಿಯತೊಡಗಿದೆ. ಬಂಡವಾಳಗಾರರು ಹೆಚ್ಚು ಹೆಚ್ಚು ಬಂಗಾರದ ಮೇಲೆ ಇನ್ವೆಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಭಾರತಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಬಳಿಗೆ ಬಂದು ನಿಂತಿದೆ. ಇನ್ನೂ ಕೇವಲ 200 ರೂಪಾಯಿ ಏರಿಕೆ ಆದರೆ ಗೋಲ್ಡ್, 1 ಲಕ್ಷ ರೂಪಾಯಿ ಆಗಿ ಗ್ರಾಹಕರಿಗೆ ಫುಲ್ ಬಿಲ್ಡಪ್ ಕೊಡಲಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ
ಬೆಂಗಳೂರು ₹98,350
ನಾಗ್ಪುರ ₹98,350
ಮುಂಬೈ ₹98,350
ಚೆನ್ನೈ ₹98,350
ಕೋಲ್ಕತ್ತಾ ₹98,350
ಪಾಟ್ನಾ ₹98,400
ಸೂರತ್ ₹98,400
ಚಂಡೀಗಢ ₹98,500
ಲಕ್ನೋ ₹98,500
ಇದನ್ನೂ ಓದಿ : ಭಾವಿ ಪತಿ ಜೊತೆ ವೈಷ್ಣವಿ ಗೌಡ ರೊಮ್ಯಾಂಟಿಕ್ ಡಿನ್ನರ್ ಡೇಟ್ – ಸೂಪರ್ ಜೋಡಿ ಎಂದ ಫ್ಯಾನ್ಸ್!
