ಭಾವಿ ಪತಿ ಜೊತೆ ವೈಷ್ಣವಿ ಗೌಡ ರೊಮ್ಯಾಂಟಿಕ್ ಡಿನ್ನರ್ ಡೇಟ್ – ಸೂಪರ್‌ ಜೋಡಿ ಎಂದ ಫ್ಯಾನ್ಸ್!

ನಟಿ ವೈಷ್ಣವಿ ಗೌಡ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬೆನ್ನಲ್ಲೇ ಭಾವಿ ಪತಿ ಜೊತೆಗೆ ವೈಷ್ಣವಿ ಡಿನ್ನರ್ ಡೇಟ್‌ಗೆ ತೆರಳಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅನುಕೂಲ್ ಮಿಶ್ರಾ ಜೊತೆ ನಟಿ ಸ್ವಿಮ್ಮಿಂಗ್ ಪೂಲ್ ಬಳಿ ಊಟ ಸವಿದಿದ್ದಾರೆ. ರೊಮ್ಯಾಂಟಿಕ್‌ ಆಗಿ ಸಮಯ ಕಳೆದಿದ್ದಾರೆ. ಈ ಕುರಿತು ಅನುಕೂಲ್ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಹೊಸ ಜೋಡಿ ಸದಾ ಚೆನ್ನಾಗಿರಲಿ‌, ಸೂಪರ್‌ ಜೋಡಿ ಅಂತ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಏ.14ರಂದು ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ವೈಷ್ಣವಿ ಕ್ಲ್ಯಾರಿಟಿ ನೀಡಿದ್ದಾರೆ.

ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಪೋಷಕರು ಈ ಮದುವೆ ನಿಶ್ಚಯಿಸಿದರು. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಗಿಲ್ ಸ್ಪೋಟಕ ಬ್ಯಾಟಿಂಗ್ – ಕೆಕೆಆರ್ ವಿರುದ್ಧ 39 ರನ್​​ಗಳಿಂದ ಗೆದ್ದ ಗುಜರಾತ್!

Btv Kannada
Author: Btv Kannada

Read More