ಪತ್ನಿ ಪಲ್ಲವಿಯಿಂದಲೇ ಕೊಲೆಯಾದ ಮಾಜಿ ಡಿಜಿ-ಐಜಿಪಿ ಓಂಪ್ರಕಾಶ್!

ಬೆಂಗಳೂರು : ಕರ್ನಾಟಕ ಮಾಜಿ ಡಿಜಿ ಐಜಿಪಿ ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಈ ಘಟನೆ ನಡೆದಿದೆ.

ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನ 3 – 3.15ರ ಮಧ್ಯೆ ಡಿಜಿ ಐಜಿಪಿ ಓಂ ಪ್ರಕಾಶ್ ಅವರ ಭೀಕರ ಹತ್ಯೆಯಾಗಿದೆ. ಮುಖಕ್ಕೆ ಚಾಕುವಿನಿಂದ ಇರಿದು ಪತ್ನಿ ಪಲ್ಲವಿ ಹತ್ಯೆಗೈದಿದ್ದು, ಎರಡೇ ಏಟಿಗೆ ಓಂ ಪ್ರಕಾಶ್ ಅವರು ಮಿಸುಕಾಡದೆ ಪ್ರಾಣ ಚೆಲ್ಲಿದ್ದಾರೆ. ಓಂ ಪ್ರಕಾಶ್​ ಸಾವಿನ ಬಳಿಕ ಪಲ್ಲವಿ ಮುಖ ಮತ್ತು ಕತ್ತಿಗೆ ಮನಸೋ ಇಚ್ಚೆ ಇರಿದಿದ್ದಾರೆ. ಮುಖದ ಮೇಲೆ 22-24 ಬಾರಿ ಇರಿದ ಬಳಿಕ ಪತ್ನಿ ಪಲ್ಲವಿ ಮತ್ತೊಬ್ಬ ನಿವೃತ್ತ DGP ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ವಿಡಿಯೋ ಕಾಲ್ ಮಾಡಿ I have killed the monster ಎಂದು ಪಲ್ಲವಿ ಇಂಗ್ಲೀಷ್​ನಲ್ಲಿ ಹೇಳಿದ್ದಾರೆ. ದಿಗಿಲು ಬಿದ್ದು ಪತಿ ರೂಪ್​ಕುಮಾರ್ ಅವರ ಪತ್ನಿ ದತ್ತಾಗೆ ಹೇಳಿದ್ದು, ತಕ್ಷಣವೇ ಕಮಿಷನರ್​ ಬಿ ದಯಾನಂದ್​ಗೆ IPS ಆರ್ ಕೆ ದತ್ತಾ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಗಿ ನೋಡಿದಾಗ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಆಸ್ತಿ ವಿಚಾರಕ್ಕೆ ಗಂಡ ಓಂ ಪ್ರಕಾಶ್​ರನ್ನ ಪತ್ನಿ ಪಲ್ಲವಿ ಕೊಲೆ ಮಾಡಿದ್ದಾರೆ. ದಾಂಡೇಲಿಯಲ್ಲಿದ್ದ ಆಸ್ತಿಯನ್ನ ನಿವೃತ್ತ ಡಿಜಿಐಜಿಪಿ ಓಂ ಪ್ರಕಾಶ್ ತಂಗಿ ಹೆಸರಿಗೆ ಮಾಡಿದ್ದರು. ಈ ಬಗ್ಗೆ ಹಲವು ಬಾರಿ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿತ್ತು, ಇದೇ ವಿಚಾರಕ್ಕೆ ಪತಿ ನಿವಾಸ ಹೆಚ್ ಎಸ್ ಆರ್ ಲೇಔಟ್ ಬಳಿ ಪತ್ನಿ ಪಲ್ಲವಿ ಧರಣಿ ಕೂಡ ಮಾಡಿದ್ದರು. ಈ ಬಗ್ಗೆ ಪತ್ನಿ ವಿರುದ್ದ ಸಹ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ನಿವೃತ್ತ DG-IGP ಓಂಪ್ರಕಾಶ್ ಬರ್ಬರ ಹತ್ಯೆ – ಪತ್ನಿಯಿಂದಲೇ ಕೊಲೆಯಾಗಿರೋ ಶಂಕೆ!

Btv Kannada
Author: Btv Kannada

Read More