ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಶೂಟೌಟ್ ಡ್ರಾಮಾನಾ – BTV ಬಿಚ್ಚಿಡ್ತಿದೆ ಫೇಕ್ ಫೈರಿಂಗ್​ ಅನುಮಾನದ EXCLUSIVE ಮಾಹಿತಿ!

ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಕಳ್ಳಾಟನಾ ಅನ್ನೋ ಅನುಮಾನಗಳು ಶುರುವಾಗಿವೆ. BTV ವಾಹಿನಿ ಫೇಕ್ ಫೈರಿಂಗ್ ಅನುಮಾನದ EXCLUSIVE ಮಾಹಿತಿ ಬಿಚ್ಚಿಡ್ತಿದೆ. ತನ್ನ ಶತ್ರುಗಳ ಮೇಲೆ ಕೇಸ್ ಫಿಟ್ ಮಾಡೋಕ್ಕೆ ಫೈರಿಂಗ್ ಹೈಡ್ರಾಮಾ ನಡೀತಾ ಎಂಬ ಚರ್ಚೆಗಳೂ ಚಾಲ್ತಿಗೆ ಬಂದಿವೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ 12mm ಬೋರ್ಗನ್ ಮೂಲಕ ಫೈರಿಂಗ್ ನಡೆದಿರೋದು ನಿಜ. ಆದ್ರೆ ಬೋರ್ಗನ್ ರಿಕ್ಕಿ ಗನ್ ಮ್ಯಾನ್ ರಾಮ್ ಪಾಲ್​ನದ್ದಾ ಎಂಬ ಅನುಮಾನ ಇದೆ. ಈಗಾಗ್ಲೇ ಪೊಲೀಸರು ಗನ್ ಮ್ಯಾನ್​ನ ಎರಡೂ ಗನ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಬಗ್ಗೆ ಬಿಡದಿ ಠಾಣೆಗೆ ಕಂಪ್ಲೇಂಟ್ ಕೊಟ್ಟಿರುವ ದೂರುದಾರ ಕಾರು ಡ್ರೈವರ್​​ ಬಸವರಾಜನ ಮೇಲೆಯೇ ಪೊಲೀಸರು ಅನುಮಾನಗೊಂಡಿದ್ದು ಲಾಠಿ ರುಚಿ ಸಿಕ್ತಿದ್ದಂತೆ ಸತ್ಯಾಂಶ ಬಾಯ್ಬಿಟ್ನಾ ಎಂಬಂತಾಗಿದೆ.

ಫೈರಿಂಗ್ ನಡೆದಾಗ ಡ್ರೈವರ್​​ ಸೀಟ್​ ಹೊಕ್ಕಿದ್ದ ಗುಂಡು ಅದೇ ಸೀಟ್​ನಲ್ಲಿದ್ದ ಚಾಲಕ ಬಸವರಾಜ್​ಗೆ ಯಾಕೆ ಗುಂಡು ತಾಕಿಲ್ಲ ಜೊತೆಗೆ ಗಾಯನೂ ಮಾಡಿಲ್ಲ. ಒಂದೇ ಒಂದು ಸಣ್ಣ ಗಾಯವೂ ಇಲ್ಲದೆ ಬಸವರಾಜ್ ಫೈರಿಂಗ್​ನಿಂದ ಬಚಾವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಎದ್ದಿದ್ದು ಒಟ್ಟಾರೆ ಡ್ರೈವರ್, ಗನ್ ಮ್ಯಾನ್ ನೀಡಿರೋ ಹೇಳಿಕೆಗಳು ಕೂಡ ವ್ಯತ್ಯಾಸಗಳಿಂದ ಕೂಡಿವೆ.

 

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮಲತಾಯಿ ಅನುರಾಧ ರೈ ಹಾಗೂ ರಾಕೇಶ್ ಮಲ್ಲಿ ಮೇಲೆ ಕೇಸು ಜಡಿಯೋಕೆ ಇಷ್ಟೆಲ್ಲಾ ಡ್ರಾಮಾ ಮಾಡಿದ್ದಾರಾ ಎಂಬ ಚರ್ಚೆ ಇದ್ದು ರಿಕ್ಕಿ ರೈ ಬಳಿ ಲೈಸೆನ್ಸ್ ಇರೋ ಗನ್​ಗಳೆಷ್ಟು.. ಲೈಸೆನ್ಸ್ ಇಲ್ಲದೇ ಇರೋ ಗನ್​ಗಳೆಷ್ಟು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ರಿಕ್ಕಿ ರೈ ಸಣ್ಣದಾಗಿ ಫೈರಿಂಗ್ ಮಾಡಿ ದೊಡ್ಡದಾಗಿ ಸುದ್ದಿ ಮಾಡಿದ್ರಾ. ರಿಕ್ಕಿ ಕಾರಿನ ಹಿಂದೆ ಕೂತು ತಾನೇ ಕಾರಿನ ಡ್ರೈವರ್ ಸೀಟಿನತ್ತ ಫೈಯರ್ ಮಾಡಿದ್ನಾ. ಗುಂಡಿನ ಚೂರು ರಿಕ್ಕಿ ಪಕ್ಕದಲ್ಲೇ ಇದ್ದಿದ್ರಿಂದ ಮೂಗಿಗೆ ಬಡೀತಾ ಎಂಬ ಹಲವು ಪ್ರಶ್ನೆಗಳಿದ್ದು ರಿಕ್ಕಿ ರೈ, ಡ್ರೈವರ್ ಬಸವರಾಜ್, ರಾಮ್​ಪಾಲ್​ ಮೇಲೆಯೇ ಭಾರೀ ಅನುಮಾನ ವ್ಯಕ್ತವಾಗುತ್ತಿದೆ.

ಪೊಲೀಸ್ ಅಧಿಕಾರಿಗಳು ಈ ಮೂವರ ಸುತ್ತಮುತ್ತವೇ ಇನ್​ವೆಸ್ಟಿಗೇಷನ್ ಕಾನ್ಸಂಟ್ರೇಟ್ ಮಾಡಿದ್ದು ಇಂದು ಸಂಜೆ ಒಳಗೆ ಫೈರಿಂಗ್ ಅಸಲಿ ರಹಸ್ಯ ಏನು ಅನ್ನೋದು ಹೊರ ಬೀಳೋದಂತೂ ಸತ್ಯ. ಯಾವ ಕಾರಣಕ್ಕಾಗಿ ಇಷ್ಟೆಲ್ಲಾ ಡ್ರಾಮಾ ಮಾಡ್ತಿದ್ದಾರೆ ಅಥವಾ ಫೈರಿಂಗ್​ ನಿಜಾನಾ ಎಲ್ಲದರ ಬಗ್ಗೆಯೂ ಸತ್ಯಾಂಶ ಹೊರ ಬರಲಿದೆ.

ಇದನ್ನೂ ಓದಿ : ಮಹೇಶ್ ಶೆಟ್ಟಿ ತಿಮರೋಡಿ ಸವಾಲಿಗೆ ಪುನೀತ್ ಕೆರೆಹಳ್ಳಿ ಕೌಂಟರ್ – ಉಜಿರೆಯಲ್ಲಿ ‘ಹಿಂದುತ್ವ’ ಶಕ್ತಿ ಪ್ರದರ್ಶನ.. ಪೊಲೀಸರ ಎಂಟ್ರಿಯಿಂದ ವಾಪಸ್!

Btv Kannada
Author: Btv Kannada

Read More