ಚಿಕ್ಕಬಳ್ಳಾಪುರ : ದ್ವಿಚಕ್ರ ವಾಹನಕ್ಕೆ ಕಂಟೈನರ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ನಡೆದಿದೆ. ವೆಂಕಟೇಶ್ (35) ದೀಕ್ಷಾ(5) ಮೃತ ದುರ್ದೈವಿಗಳು.
ಈ ಭೀಕರ ಅಪಘಾತದಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಿಂದ ಆಂಧ್ರಗೆ ತೆರಳುತ್ತಿದ್ದ ಕಂಟೈನರ್ ಅಪಘಾತದಿಂದ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕೊಡಗಿನಲ್ಲಿ ಕಾಣೆಯಾಗಿದ್ದ ಮಹಿಳೆ ಲವ್ವರ್ ಜೊತೆ ಪ್ರತ್ಯಕ್ಷ – ಪೊಲೀಸರ ಕಾರ್ಯ ವೈಖರಿ, ತನಿಖೆ ಲೋಪಗಳ ಬಗ್ಗೆ ಕೋರ್ಟ್ ಗರಂ!

Author: Btv Kannada
Post Views: 189