ಬೆಂಗಳೂರು : ಈಶ್ವರಪ್ಪ ಕೊರಳಿಗೆ ಮತ್ತೆ ಅಕ್ರಮ ಆಸ್ತಿ ಉರುಳು ಬಿದ್ದಿದ್ದು, 13 ವರ್ಷಗಳ ಬಳಿಕ ಈಶ್ವರಪ್ಪ ಅಕ್ರಮ ಆಸ್ತಿ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೆ. ಎಸ್ ಈಶ್ವರಪ್ಪ ವಿರುದ್ಧ FIR ದಾಖಲಿಸಿ 3 ತಿಂಗಳೊಳಗೆ ತನಿಖೆ ಮುಗಿಸಲು ಶಿವಮೊಗ್ಗ ಲೋಕಾಯುಕ್ತ DySPಗೆ ಸ್ಪೆಷಲ್ ಕೋರ್ಟ್ ಆದೇಶ ನೀಡಿದೆ.
2012ರಲ್ಲಿ ಮಾಜಿ ಮಂತ್ರಿ ಕೆ. ಎಸ್ ಈಶ್ವರಪ್ಪ ಅವರು ಅಕ್ರಮವಾಗಿ ಆಸ್ತಿ ಗಳಿಸಿ ಅದನ್ನು ತಮ್ಮ ಪತ್ನಿ, ಪುತ್ರ, ಸಂಬಂಧಿಕರ ಹೆಸರಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲರಾದ ವಿನೋದ್ ಬಿ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಕ್ರಯಪತ್ರ ಸಮೇತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು FIR ದಾಖಲಿಸಿಕೊಂಡು, ಅಂದಿನ DySP ಪಿ ಓ ಶಿವಕುಮಾರ್ ನೇತೃತ್ವದಲ್ಲಿ ಈಶ್ವರಪ್ಪ ಮೇಲೆ ರೇಡ್ ಮಾಡಿದ್ದಾರೆ.
ದಾಳಿ ವೇಳೆ ಈಶ್ವರಪ್ಪ ಮನೆಯಲ್ಲಿ ನೋಟ್ ಎಣಿಕೆ ಮೆಷಿನ್ ಪತ್ತೆಯಾಗಿರೋದು ಭಾರೀ ಚರ್ಚೆಗೆ ಕಾರಣವಾಗಿತ್ತು. ತನಿಖೆ ನಡೆಸಿದಾಗ ಈಶ್ವರಪ್ಪ ಕುಟುಂಬದ ಹೆಸರಲ್ಲಿ ಕೋಲ್ಕತ್ತಾದ 12 ಶೆಲ್ ಕಂಪನಿಗಳ ಹೂಡಿಕೆ ವಿಚಾರ ಬಯಲಿಗೆ ಬಂದಿತ್ತು. ಕೋರ್ಟ್ಗೆ ತನಿಖಾ ವರದಿ ಸಲ್ಲಿಸುವ ಹಂತದಲ್ಲಿ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ವಕೀಲ ವಿನೋದ್ ಬಿ ಅವರು ದೂರು ದಾಖಲಿಸುವ ಪೂರ್ವದಲ್ಲಿ ಸರ್ಕಾರದ ಅನುಮತಿ ಪಡೆದಿಲ್ಲ ಎಂದು FIR ರದ್ದುಗೊಳಿಸಲು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ವಿನೋದ್ ಹೈಕೋರ್ಟ್ ಆದೇಶದ ಮರುಪರಿಶೀಲನೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜನಪ್ರತಿನಿಧಿಗಳ ಕೋರ್ಟ್ಗೆ ಸೂಚನೆ ನೀಡಿತ್ತು. ಇದೀಗ ಈಶ್ವರಪ್ಪ ವಿರುದ್ಧ ತನಿಖೆಗೆ ನ್ಯಾ. ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದು,
ಇದೇ ಪ್ರಕರಣದಲ್ಲಿ EDಗೂ ದೂರು ನೀಡಿರೋದ್ರಿಂದ ED ಎಂಟ್ರಿ ಕೊಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಮಾರ್ಚ್ ತ್ರೈಮಾಸಿಕದಲ್ಲಿ HDFC ಬ್ಯಾಂಕ್ಗೆ ಭರ್ಜರಿ ಲಾಭ – ಶೇ 6.7 ಹೆಚ್ಚಳ.. ನಿವ್ವಳ ಲಾಭ 17,616 ಕೋಟಿ.. ಪ್ರತಿ ಷೇರಿಗೆ 22 ರೂ. ಲಾಭ!
