‘ನಾನು ಮತ್ತು ಗುಂಡ-2’ ಸಿನಿಮಾದ ಟೀಸರ್ ರಿಲೀಸ್ ​- ಚಿತ್ರತಂಡಕ್ಕೆ ಶೈಲಜಾ ಕಿರಗಂದೂರು ಶುಭ ಹಾರೈಕೆ!

ಗುಂಡ(ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆ ಇಟ್ಟುಕೊಂಡು ನಿರ್ಮಿಸಿದ್ದ ‘ನಾನು ಮತ್ತು ಗುಂಡ’ ಚಿತ್ರ ಎರಡೂವರೆ ವರ್ಷಗಳ ಹಿಂದೆ ತೆರೆಕಂಡು ಜನಮನ ಸೂರೆಗೊಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ “ನಾನು ಮತ್ತು ಗುಂಡ -2” ತೆರೆಗೆ ಬರಲು ಸಿದ್ದವಾಗಿದೆ.

ಇತ್ತೀಚೆಗೆ ಈ ಚಿತ್ರದ ಟೀಸರನ್ನು ಕೆಜಿಎಫ್ ಖ್ಯಾತಿಯ ನಿರ್ಮಸಪಕ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ನಾನು ಮತ್ತು ಗುಂಡ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅದರ ಮುಂದುವರಿದ ಭಾಗವನ್ನು ರಘು ಹಾಸನ್ ಮಾಡಿದ್ದಾರೆ. ಈ ಸಿನಿಮಾ ಅದಕ್ಕಿಂತ ಹೆಚ್ಚು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮೊದಲಭಾಗದಲ್ಲಿ ನಟಿಸಿದ್ದ ಶಿವರಾಜ್ ಕೆ.ಆರ್.ಪೇಟೆ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಚಿತ್ರದಲ್ಲಿ ರಾಕೇಶ್ ಆಡಿಗ ನಾಯಕನಾಗಿದ್ದು, ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ, ನಿರ್ದೇಶಕ ರಘು ಹಾಸನ್ ರಾಕೇಶ್ ಈ ಚಿತ್ರದಲ್ಲಿ ಶಿವರಾಜ್ ಅವರ ಮಗನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಗೆ ಹೋಗಲಿದೆ. ಮೊದಲಭಾಗ ಮಾಡುವಾಗಲೇ ೨ರ ಕಥೆ ರೆಡಿ ಮಾಡಿಕೊಂಡಿದ್ದೆ. ಸೋಷಿಯಲ್ ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದ್ದು, ಮೇ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನಿದೆ.

ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.

ಚಿತ್ರದ ಸಂಭಾಷಣೆ ಸಾಹಿತ್ಯವನ್ನು ರೋಹಿತ್ ರಮನ್ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ರುತ್ವಿಕ್ ಮುರಳೀಧರ್ ನಿರ್ವಹಿಸಿದ್ದಾರೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನ, ನವೀನ್ ಅವರ ಸೌಂಡ್ ಡಿಸೈನ್ ಇದೆ.

ಇದನ್ನೂ ಓದಿ : ಜನಾಕ್ರೋಶ ಯಾತ್ರೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಆರೋಪ – ವಿಜಯೇಂದ್ರ, ಅಶೋಕ್ ವಿರುದ್ಧ ಸೂರ್ಯ ಮುಕುಂದರಾಜ್ ದೂರು!

Btv Kannada
Author: Btv Kannada

Read More