ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಚೇರ್​ ಹಾಕಿ ಟೀ ಕುಡಿಯುತ್ತಾ ಹುಚ್ಚಾಟ – ಭೂಪನಿಗೆ ಬಿಸಿ ಮುಟ್ಟಿಸಿದ​ ಪೊಲೀಸರು!

ಬೆಂಗಳೂರು : ನಡು ರಸ್ತೆಯಲ್ಲಿಯೇ ಚೇರ್ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್‌ ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹೌದು.. ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಅಸಾಮಿಯೋರ್ವ ಕಿರಿಕ್‌ ಮಾಡಿದ್ದ. ನಂತರ ಆ ರೀಲ್ಸ್‌ ಅನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123ಯಲ್ಲಿ ಅಪ್ಲೋಡ್‌ ಮಾಡಿದ್ದ. 

ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಈ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಹಿನ್ನೆಲೆ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದರು.

ಆ ಬಳಿಕ ಬೆಂಗಳೂರು ಪೊಲೀಸರು ಪುಂಡನ ರೀಲ್ಸ್‌ ಮತ್ತು ಬಂಧನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಮುಂದೆ ಯಾರಾದರೂ ಈ ರೀತಿ ಹುಚ್ಚಾಟ ಮಾಡಿದ್ರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಇಂದು ಆರ್‌ಸಿಬಿ-ಪಂಜಾಬ್ ಬಿಗ್ ಫೈಟ್ – ಪಂದ್ಯಕ್ಕೆ ​ಮಳೆ ಅಡ್ಡಿಯಾಗುವ ಆತಂಕ.. IMD ಅಲರ್ಟ್!

Btv Kannada
Author: Btv Kannada

Read More