ಖ್ಯಾತ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ವರ್ಷವಷ್ಟೇ ಮೊದಲ ಮಗಳು ಐಶ್ವರ್ಯಾ ಮದುವೆ ಮಾಡಿದ್ದ ಅರ್ಜುನ್ ಸರ್ಜಾ ಈಗ ಎರಡನೇ ಪುತ್ರಿ ಮದುವೆ ಮಾಡಲು ರೆಡಿಯಾಗಿದ್ದಾರೆ.
ಇದೀಗ ಹುಡುಗನ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಂಜನಾ ಅರ್ಜುನ್ ಸರ್ಜಾ ಅವರು ಗುಡ್‌ನ್ಯೂಸ್ ಹಂಚಿಕೊಂಡಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಅಂಜನಾ ಅವರು ವಿದೇಶಿ ಹುಡುಗನನ್ನು ಪ್ರೀತಿಸುತ್ತಿದ್ದರು. ಈ ವಿಷಯವನ್ನು ಈಗ ರಿವೀಲ್ ಮಾಡಿದ್ದಾರೆ. ಐಸೆಯ (Isaiah ) ಎನ್ನುವವರ ಜೊತೆ ಅಂಜನಾ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಂಜನಾ ಅವರು ಪ್ರಿ ವೆಡ್ಡಿಂಗ್ ಫೋಟೋಗಳನ್ನು ಹಂಚಿಕೊಂಡು, “ಯೆಸ್ ಎಂದು ಹೇಳಿದೆ ಎಂದು ಬರೆದುಕೊಂಡಿದ್ದರು. ಅದಕ್ಕೆ ಅರ್ಜುನ್ ಸರ್ಜಾ ಅವರು, “ನಾನು ಆಗಲೇ ನಿನ್ನ ಪಾರ್ಟ್ನರ್ ಆಗಿದ್ದರು ಎಂದುಕೊಂಡಿದ್ದೆ” ಎಂದು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.
ಅರ್ಜುನ್ ಸರ್ಜಾ ಕುಟುಂಬ ಕೂಡ ಫೋಟೋ ಶೂಟ್‌ನಲ್ಲಿ ಭಾಗಿಯಾಗಿ ಸಖತ್ ಪೋಸ್ ನೀಡಿದೆ. ಅಂಜನಾ ಜೋಡಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಗೆಳೆಯನ ಫೋಟೋ ಬಿಡುಗಡೆ ಮಾಡಿರುವ ಅಂಜನಾ ಅವರು ಸದ್ಯದಲ್ಲೇ ಗುಡ್‌ನ್ಯೂಸ್ ಬಗ್ಗೆ ಕೂಡ ಅಪ್ಡೇಟ್ ನೀಡಲಿದ್ದಾರೆ.
ಇದನ್ನೂ ಓದಿ : ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಅಪಾಯದಿಂದ ಪಾರು!
