ನೆಲದ ಮೇಲೆ ನಿದ್ರೆ, ಸೊಳ್ಳೆ, ತಿಗಣೆಯೇ ಆಸರೆ – ಜೈಲಿನಲ್ಲಿ 1 ರಾತ್ರಿ ಕಳೆದ ಗಾಂಚಾಲಿ ಗಿರಾಕಿ ರಜತ್​​ ಕೆರಿಯರ್ ಎಂಡ್ ಆಯ್ತಾ?

ಬೆಂಗಳೂರು : ತಿರ್ಪೆ ಶೋಕಿವಾಲ, ಮೈಯೆಲ್ಲಾ ಮದ ಏರಿಸಿಕೊಂಡಿದ್ದ ಪೊರ್ಕಿ ರಜತ್ ಅಂತೂ ಇಂತೂ ಮತ್ತೊಮ್ಮೆ ಜೈಲು ಪಾಲಾಗಿದ್ದಾನೆ. ಮಾಡಬಾರದ ಕಚಡಾ ಕೆಲಸ ಮಾಡಿ, ಜಾಮೀನು ಕೊಟ್ಟ ಕೋರ್ಟ್​ಗೂ ಬೆಲೆ ಕೊಡದ ದುರಹಂಕಾರಿ​ ರಜತ್ 2ನೇ ಬಾರಿ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾನೆ. ತಾನು ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡ ತಿರಸ್ಕಾರಗೊಂಡಿದ್ದು, 14 ದಿನಗಳ ಕಾಲ ಅಂದರೆ ಏಪ್ರಿಲ್​​ 29ರವರೆಗೂ ಫೈಬರ್​ ರಜತ್​​ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ.

ಗಾಂಚಾಲಿ ಗಿರಾಕಿ ರಜತ್ ಜೈಲು ಸೇರಿ 24 ಗಂಟೆ ಸಮೀಪಿಸುತ್ತಿದ್ದು, ಒಂದು ರಾತ್ರಿ ಪರಪ್ಪನ ಅಗ್ರಹಾರದಲ್ಲೇ ಅರೆ ಮನಸ್ಸಿನಿಂದ ಕಳೆದಿದ್ದಾನೆ. ಸೊಳ್ಳೆ, ತಿಗಣೆ ಕಾಟದ ಜೊತೆ ಒಂದು ರಾತ್ರಿ ಮುಗಿಸಿದ್ದು, ಜೈಲಿನ ಊಟ ಮಾಡಲು ಮೀನಾಮೇಷ ಎಣಿಸಿದ್ದಾನೆ. ಕೊನೆಗೆ ಹಸಿವು ತಾಳಲಾರದೇ ಬೇರೆ ಗತಿ ಇಲ್ಲದೇ ಜೈಲು ಅಧಿಕಾರಿಗಳು ಕೊಟ್ಟಂತಹ ಮುದ್ದೆ, ಅನ್ನ ಸಾಂಬಾರ್ ತಿಂದಿದ್ದಾನೆ. ಜೈಲಿನಲ್ಲಿ ರಜತ್​​ಗೆ ಯಾವುದೇ ವಿಶೇಷ ಸೌಲಭ್ಯಗಳು ಇಲ್ಲದ ಕಾರಣ ನೆಲದ ಮೇಲೆ ಚಾಪೆ ಹಾಸಿ ಸೊಳ್ಳೆ, ತಿಗಣೆ ಜೊತೆ ಮಲಗಿ ರಾತ್ರಿ ಕಳೆದಿದ್ದಾನೆ. ಏಪ್ರಿಲ್​​ 29ರವರೆಗೂ ರಜತ್​ಗೆ ಸೊಳ್ಳೆ, ತಿಗಣೆಗಳೇ ಆಸರೆ.

ಹೊರಗಿದ್ದಾಗ ಬಿಟ್ಟಿ ಶೋಕಿ, ಚಪ್ಪರ್​ಗಳ ರೀತಿ ದೌಲತ್ತು ತೋರಿಸಿಕೊಂಡು ಕಂಡ ಕಂಡವರಿಗೆ ಬೆದರಿಕೆ ಹಾಕುತ್ತಿದ್ದ ರಜತ್​​ ಜೈಲು ಸೇರಿದ ಬಳಿಕ ಗಪ್​​ ಚುಪ್​ ಆಗಿದ್ದಾನೆ. ಪಾರ್ಟಿ, ಪಬ್, ಕ್ಲಬ್​​ ಅಂತಾ​​ ಎಂಜಾಯ್ ಮಾಡಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿದ್ದ ರಜತ್ ಇದೀಗ ತಾನಾಯ್ತು ತನ್ನ ಪಾಡಾಯ್ತು ಅಂತಾ ಬೆಪ್ಪನಾಗಿ ಚಿಂತೆಗೆ ಜಾರಿದ್ದಾನೆ. ಕಾನೂನಿಗೆ ಬೆಲೆ ಕೊಟ್ಟು, ಕೋರ್ಟ್​ ಕಂಡೀಷನ್​​ಗಳನ್ನು ಉಲ್ಲಂಘಿಸದೇ ಗಾಂಚಾಲಿ ಬಿಟ್ಟು ತಗ್ಗಿ ಬಗ್ಗಿ ನಡೆಯುತ್ತಿದ್ರೆ ಇವತ್ತು ರಜತ್​ಗೆ ಇಂತಹ ದುರ್ಗತಿ ಬರುತ್ತಿರಲಿಲ್ಲ. ದುರಂಹಕಾರ, ದೌಲತ್ತು ದರ್ಪ ಅನ್ನೋದು ಮನುಷ್ಯನನ್ನು ಅಧೋಗತಿಗೆ ಇಳಿಸಿರುವ ಸಾಲಿನಲ್ಲಿ ಈಗ ರಜತ್ ಸೇರಿಕೊಂಡಿದ್ದಾನೆ.

ಅಸಲಿ​ ಮಚ್ಚು ಬಳಸಿ ರೀಲ್ಸ್ ಮಾಡಿ ಸಾರ್ವಜನಿಕವಾಗಿ ಕೆಟ್ಟ ಸಂದೇಶ ರವಾನಿಸಿದ ಬಳಿಕ ಆ ಮಚ್ಚನ್ನು ತುಂಡು ಮಾಡಿ ಸುಮನಹಳ್ಳಿ ಮೋರಿಗೆ ಎಸೆದು ಸಾಕ್ಷಿ ನಾಶ ಮಾಡಿದ್ದೇನೆ. ಪೊಲೀಸರು ನಂದು ಏನೂ ಕಿತ್ತುಕೊಳ್ಳೋದಕ್ಕೆ ಆಗಲ್ಲ ಎಂದು ಪುಡಿರೌಡಿ ರೀತಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ ಗಾಂಚಾಲಿ ರಜತ್​ಗೆ ಬಸವೇಶ್ವರ ನಗರ ಪೊಲೀಸರು ಚಡ್ಡಿ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಿ ಅಂಡ್​ ಮೇಲೆ ಲಾಠಿ ಬೀಸಿ ಖಾಕಿ ಅಂದ್ರೆ ಏನು ಅಂತಾ ತೋರಿಸಿದ್ದಾರೆ. ಠಾಣೆಗೆ ಬಂದಾಗ ಶರ್ಟ್​ ಬಟನ್​ ಓಪನ್​ ಬಿಟ್ಕೊಂಡು ಚಪ್ಪರ್​ ತರ ಬಂದಿದ್ದ ರಜತ್ ಪೊಲೀಸರು ವರ್ಕೌಟ್ ಮಾಡಿದ್ಮೇಲೆ ಶರ್ಟ್​ ಬಟನ್ ಹಾಕಿ ಸೈಲೆಂಟ್​ ಆಗಿ ಬೆಪ್ಪನಂತೆ ಪೊಲೀಸರ ವಾಹನದಲ್ಲಿ ಕೂತಿದ್ದಾನೆ.

ಇನ್ನೂ ತನ್ನ ಜೀವನ, ಸಿನಿಮಾ ಕೆರಿಯರ್​ ಬಗ್ಗೆ ತಲೆಕೆಡಿಸಿಕೊಳ್ಳದೇ ಸಾಲು ಸಾಲು ಕಿರಿಕ್​ ಕೇಸ್​ಗಳಲ್ಲಿ, ಅನಗತ್ಯವಾಗಿ ವಿವಾದಗಳಲ್ಲಿ ತೊಡಗಿಸಿಕೊಂಡಿರುವ ಗಾಂಚಾಲಿ ಗಿರಾಕಿ ರಜತ್ ಸೆಲೆಬ್ರೆಟಿ ಜೀವನ ಕೂಡ ಅಂತ್ಯ ಆಗುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಏನೇ ಹೇಳಿ ತನ್ನ ಪಾಡಿಗೆ ತಾನು ಗಾಂಚಾಲಿ, ದುರಂಹಕಾರ ಬಿಟ್ಟು ಎಲ್ಲರಂತೆ ಜೀವನ ನಡೆಸಿದ್ರೆ ರಜತ್​ ಎನ್ನುವ ಹೆಸರನ್ನು ಜನ ನೆನಪಿಟ್ಟುಕೊಳ್ಳುತ್ತಾರೆ. ಈ ರೀತಿ ತಿರ್ಪೆ ಶೋಕಿ ಮಾಡಿಕೊಂಡು ಜೈಲಿಗೆ ಹೋದ್ರೆ ರಜತ್ ಜೀವನ ಎಂಡ್ ಆಗೋದ್ರ ಜೊತೆಗೆ ಜನರ ನೆನಪಿನಿಂದಲೂ ಶಾಶ್ವತವಾಗಿ ದೂರ ಆಗೋದಂತು ಸತ್ಯ.

ಇದನ್ನೂ ಓದಿ : ಜಾತಿ ಜನಗಣತಿ ಸಂಘರ್ಷ – BTVಯಲ್ಲಿ ನೂರಾರು ಜಾತಿ ಜನಸಂಖ್ಯೆಯ ಪಕ್ಕಾ ಲೆಕ್ಕ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Btv Kannada
Author: Btv Kannada

Read More