‘ಚಿನ್ನ’ ನೀ ಬಲು ದುಬಾರಿ ಕಣೇ.. ರಾಕೆಟ್​ ವೇಗದಲ್ಲಿ ಆಕಾಶದತ್ತ ‘ಗೋಲ್ಡ್​’ – ಜಸ್ಟ್​ 10 ಗ್ರಾಂ ಬಂಗಾರಕ್ಕೆ 1 ಲಕ್ಷ ರೂಪಾಯಿ!

ನವದೆಹಲಿ : ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಧಿಸಿದ ಪ್ರತೀಕಾರದ ಸುಂಕಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಂಕದ ಬಿಸಿ ತಟ್ಟುತ್ತಿದ್ದಂತೆಯೇ ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೂ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್, ಷೇರುಪೇಟೆಗೆ ಕೊಂಚ ಚೇತರಿಕೆ ನೀಡಿದ್ದಾರೆ. ಇದು ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಗಣನೀಯವಾಗಿ ಏರಿಕೆಗೂ ಕಾರಣವಾಗಿದೆ.

ಕಳೆದ ಒಂದು ವಾರದಿಂದ ಷೇರು ಪೇಟೆಯ ಏರುಪೇರಿನಿಂದ ಚಿನ್ನದ ದರದಲ್ಲಿ ಗಣನೀಯವಾಗಿ 300ರಿಂದ 900 ರೂ. ರವರೆಗೂ ಹೆಚ್ಚಳ ಕಂಡುಬಂದಿದೆ. ಇದು ಚಿನ್ನ ಖರೀದಿದಾರರನ್ನು ಅಕ್ಷರಶಃ ಚಿಂತೆಗೆ ದೂಡಿದೆ. ಇನ್ನೇನು ಮದುವೆ, ಶುಭಕಾರ್ಯಗಳು ಸಂಭವಿಸುವ ಸಮಯ ಸಮೀಪಿಸುತ್ತಿದೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಕಾಣುತ್ತಿದೆ ಎಂಬ ಪ್ರಶ್ನೆಯನ್ನು ಗ್ರಾಹಕರು ಮುಂದಿಟ್ಟಿದ್ದರು. ಪ್ರಸ್ತುತ ವರದಿಗಳ ಪ್ರಕಾರ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಈಗ 98,000 ರೂ. ಗಡಿದಾಟಿದೆ.

ಮುಂದಿನ ದಿನಗಳಲ್ಲಿ ಸಾಮಾನ್ಯ ಜನರು ಚಿನ್ನ ಖರೀದಿಸಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ ಇಂದಿನ ದರ ಏರಿಕೆ. 10 ಗ್ರಾಂ ಚಿನ್ನದ ಬೆಲೆ ಈಗಾಗಲೇ 1 ಲಕ್ಷ ರೂ.ಗೆ ಹತ್ತಿರವಾಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ಮೂರು-ನಾಲ್ಕು ತಿಂಗಳಲ್ಲಿ 1ಲಕ್ಷ ರೂ. ದಾಟಿ, ಇನ್ನೂ ಹೆಚ್ಚಾಗುವುದರಲ್ಲಿ ಅಚ್ಚರಿಯೇ ಇಲ್ಲ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

10 ಗ್ರಾಂ ಚಿನ್ನದ ದರ 98,400 ರೂ. : ಚಿನ್ನದ ಬೆಲೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಬೆಲೆ ಹಿಂದೆಂದೂ ನೋಡಿರದ ರೀತಿಯಲ್ಲಿ ಹೆಚ್ಚುತ್ತಿದೆ ಮತ್ತು ಅನಿರೀಕ್ಷಿತವಾಗಿದೆ. ಬುಧವಾರ (ಏ.16) ರಾತ್ರಿ ಒಂದು ಔನ್ಸ್ (31.10 ಗ್ರಾಂ) ಚಿನ್ನದ ಅಂತರರಾಷ್ಟ್ರೀಯ ಬೆಲೆ 3,330 ಡಾಲರ್ ತಲುಪಿದೆ. ಇತಿಹಾಸದಲ್ಲಿ ತಾಮ್ರದ ಬೆಲೆ 3,300 ಡಾಲರ್ ತಲುಪಿರುವುದು ಇದೇ ಮೊದಲು. ಇದರ ಪರಿಣಾಮವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಗಣನೀಯವಾಗಿ ಏರಿದೆ.

ಬುಧವಾರ ರಾತ್ರಿ 11.30ಕ್ಕೆ ದಾಖಲಾದ ವರದಿ ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 98,400 ರೂ.ಗೆ ತಲುಪಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 98,900 ರೂ. ವಹಿವಾಟು ನಡೆಸುತ್ತಿದೆ. ದೇಶೀಯ ಸರಕು ವಿನಿಮಯ ಕೇಂದ್ರ MCXನಲ್ಲಿ, 24 ಕ್ಯಾರೆಟ್ ಚಿನ್ನದ 10ಗ್ರಾಂ ಬೆಲೆ ಗರಿಷ್ಠ 95,732 ರೂ. ಆಗಿದೆ. ಆದಾಗ್ಯೂ, ಅಂತಿಮವಾಗಿ 93,451 ರೂ.ಗೆ ಮುಕ್ತಾಯಗೊಂಡಿದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಚಿನ್ನದ ಬೆಲೆ ಏರಿಕೆಯಿಂದ ಚಿಂತಿತರಾಗಿದ್ದಾರೆ. ಚಿನ್ನದ ಬೆಲೆ ಈ ಮಟ್ಟಿಗೆ ಹೆಚ್ಚುತ್ತಲೇ ಇದ್ದರೆ, ಮುಂದಿನ ಐದರಿಂದ ಆರು ತಿಂಗಳಲ್ಲಿ ಅದು 1 ಲಕ್ಷ ರೂ.ಗೆ ತಲುಪುವುದು ಶತಸಿದ್ದ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ

ಇದನ್ನೂ ಓದಿ : ನಿರ್ಮಾಪಕಿ ಶೈಲಜಾ ನಾಗ್‌-ಬಿ.ಸುರೇಶ್‌ ದಂಪತಿಯ ಪುತ್ರಿ ಚಂದನಾ ನಾಗ್‌ ಭರತನಾಟ್ಯ ರಂಗಪ್ರವೇಶ!

Btv Kannada
Author: Btv Kannada

Read More