ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿ ​ಹಣ, ಮೊಬೈಲ್ ಸುಲಿಗೆ ಮಾಡಿದ್ದ ಇಬ್ಬರ ಬಂಧನ​​!

ಬೆಂಗಳೂರು : ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿ ಮೊಬೈಲ್​, ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬಂಡೇಪಾಳ್ಯ ಠಾಣಾ ವ್ಯಾಪ್ತಿಯ ಹೊಸಪಾಳ್ಯ ಸ್ಟಾಪ್ ನಂದಿನಿ ಪಾರ್ಲರ್ ಬಳಿ ನಡೆದಿದೆ.

5ಕ್ಕೂ ಅಧಿಕ ಮಂದಿ ಗಾಂಜಾ ನಶೆಯಲ್ಲಿ ಉತ್ತರ ಪ್ರದೇಶ ಮೂಲದ ಹುಡುಗರಿಗೆ ಹಲ್ಲೆ ಮಾಡಿ ಅವರಿಂದ ಮೊಬೈಲ್ ಹಾಗೂ ಹಣ ಸುಲಿಗೆ ಮಾಡಿದ್ದಾರೆ. ಆರೋಪಿಗಳು ಹಲ್ಲೆ ಮಾಡುವ ದೃಶ್ಯ ಸಿಸಿಟಿವಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಅಮಾಯಕ ಹುಡುಗಯರ ಮೇಲೆ ಆರೋಪಿಗಳು ಸಿಕ್ಕ ಸಿಕ್ಕ ಹಾಗೆ ಹಲ್ಲೆ ಮಾಡಿದ್ದು, ಕಳೆದ 15ನೇ ತಾರೀಖು ರಾತ್ರಿ 10.15ರ ಸುಮಾರಿಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುಪಿ, ಬಿಹಾರದ ಹುಡುಗರು ಐಸ್ ಕ್ಯಾಂಡಿ ವ್ಯಾಪಾರ ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಇವರ ಬಳಿ ಹಣ ಇದೆ ಅಂತ ತಿಳಿದು ಗಾಂಜಾ ನಶೆಯಲ್ಲಿದ್ದ ಯುವಕರು ಹಣ ಕೇಳಿದ್ದಾರೆ. ಕೊಡದೇ ಇದ್ದಾಗ ಏಕಾಏಕಿ ಅಟ್ಟಾಡಿಸಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ನಂದಿನಿ ಭೂತ್ ಮಾಲೀಕ ಕೂಡ ಆರೋಪಿಗಳನ್ನ ತಡೆದಿದ್ದಾರೆ. ಆದ್ರೆ ಕ್ಯಾರೆ ಅನ್ನದೆ ಸಿಕ್ಕ ಸಿಕ್ಕ ಹಾಗೆ ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಈ ವೇಳೆ ನಂದಿನಿ ಭೂತ್ ಮಾಲೀಕ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಜಾತಿ ಗಣತಿ ಕ್ಲೈಮ್ಯಾಕ್ಸ್.. ಇಂದು ಮಹತ್ವದ ಸಚಿವ ಸಂಪುಟ ಸಭೆ – ಸಿಎಂ ಮುಂದಿರುವ ಆಯ್ಕೆಗಳೇನು?

Btv Kannada
Author: Btv Kannada

Read More