ಬೆಂಗಳೂರು : ಗಾಂಚಾಲಿ, ಕೊಬ್ಬಿನಿಂದ ಮೆರೆಯುತ್ತಿದ್ದ ಪೊರ್ಕಿ ರಜತ್ನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಕಂಡ ಕಂಡಲ್ಲಿ ದರ್ಪ ತೋರಿಸುತ್ತಿದ್ದ ರಜತ್ನನ್ನು ಬಸವೇಶ್ವರ ನಗರ ಪೊಲೀಸರು ‘ರಿಯಲ್ ಮಚ್ಚು’ ನಾಶ ಮಾಡಿದ ಪ್ರಕರಣದಲ್ಲಿ ಕೊನೆಗೂ ಬಂಧಿಸಿದ್ದಾರೆ.
ಇತ್ತೀಚೆಗೆ ಒರಿಜಿನಲ್ ಮಚ್ಚು ನಾಶ ಮಾಡಿ ಮೋರಿಗೆ ಎಸೆದಿದ್ದೇನೆ ಎಂದು ರಜತ್ ಓಪನ್ ಆಗಿ ಹೇಳಿದ್ದರು. ಮಚ್ಚು ನಾಶ ಮಾಡಿದ್ರೂ ಪೊಲೀಸರು ನನಗೇನೂ ಮಾಡಕ್ಕಾಗಲ್ಲ, ಏನ್ ಕಿತ್ಕೊತ್ತೀರಾ ಎಂದು ಬಹಿರಂಗವಾಗಿ ದರ್ಪ ತೋರಿಸಿದ್ದರು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಆ ಬಳಿಕ ಎಚ್ಚೆತ್ತ ಬಸವೇಶ್ವರ ನಗರ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿಯವರು, ಇಂದು 11 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರಜತ್ಗೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಂತೆ NBW ಪ್ರಕರಣದಲ್ಲಿ ರಜತ್ನ್ನು ಬಂಧಿಸಲಾಗಿದೆ. ಏನ್ ಕಿತ್ಕೊತ್ತೀರಾ ಎಂದಿದ್ದ ರಜತ್ಗೆ ಪೊಲೀರು ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ರಜತ್ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಿರುವ ಪೊಲೀಸರು, ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರನ್ನೇ ಪ್ರಶ್ನೆ ಮಾಡಿದ್ದ ಪೊರ್ಕಿ ರಜತ್ಗೆ ಇದೀಗ ಮತ್ತೆ ಜೈಲು ವಾಸ ಅನುಭವಿಸುವಂತಾಗಿದೆ.
ಇದನ್ನೂ ಓದಿ : ಯತ್ನಾಳ್ ಉಚ್ಚಾಟನೆ ಬಳಿಕ ಮೊದಲ ಬಾರಿ ವಿಜಯಪುರಕ್ಕೆ ವಿಜಯೇಂದ್ರ – ನಾಳಿನ ಜನಾಕ್ರೋಶ ಯಾತ್ರೆಯಲ್ಲಿ ಭಾಗಿ.. ಪೊಲೀಸರ ಬಿಗಿ ಭದ್ರತೆ!
