ಕೊಬ್ಬಿನಿಂದ ಮೆರೆಯುತ್ತಿರುವ ರಜತ್​ಗೆ ಮತ್ತೆ ಬಂಧನ ಭೀತಿ – ರಿಯಲ್ ಮಚ್ಚು ನಾಶದ ಆರೋಪದಲ್ಲಿ ಇಂದೇ ಅರೆಸ್ಟ್ ಆಗ್ತಾರಾ ಪೊರ್ಕಿ?

ಬೆಂಗಳೂರು : ರಿಯಲ್​​​ ಮಚ್ಚು ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೊಬ್ಬಿನಿಂದ ಮೆರೆಯುತ್ತಿರುವ ಪೊರ್ಕಿ ರಜತ್​ಗೆ ಅರೆಸ್ಟ್ ಭೀತಿ ಶುರುವಾಗಿದ್ದು, ಬಸವೇಶ್ವರ ನಗರ ಪೊಲೀಸರು ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ.

ಹೌದು.. ಇತ್ತೀಚೆಗೆ ಒರಿಜಿನಲ್​​ ಮಚ್ಚು ನಾಶ ಮಾಡಿದ್ದೇನೆ ಎಂದು ರಜತ್ ಓಪನ್ ಆಗಿ ಹೇಳಿದ್ದರು. ಮಚ್ಚು ನಾಶ ಮಾಡಿದ್ರೂ ಪೊಲೀಸರು ನನಗೇನೂ ಮಾಡಕ್ಕಾಗಲ್ಲ ಎಂದು ಬಹಿರಂಗವಾಗಿ ದರ್ಪ ತೋರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಸಾಕ್ಷಿ ನಾಶದ ಆರೋಪದಲ್ಲಿ ಇವತ್ತೇ ರಜತ್​ನ್ನನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ರೀಲ್ಸ್​ನಲ್ಲಿ ಬಳಸಿದ್ದ ರಿಯಲ್​ ಮಚ್ಚು ಸಿಗದ ಹಿನ್ನೆಲೆ ನೋಟಿಸ್ ಜಾರಿ ಮಾಡಿರುವ ಪೊಲೀಸರು ಇಂದು 11 ಗಂಟೆಯೊಳಗೆ ಠಾಣೆಗೆ ಹಾಜರಾಗಲು ರಜತ್​ಗೆ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಕಳೆದ ಒಂದು ತಿಂಗಳ ಹಿಂದೆ  ರಜತ್ ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ರಜತ್​ನ್ನು ಬಂಧಿಸಿದ್ದರು. ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಅದು ರಿಯಲ್ ಮಚ್ಚು ಎನ್ನುವುದು ಗೊತ್ತಾಗಿತ್ತು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ. ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ಇದೀಗ ನೋಟಿಸ್ ನೀಡಿದ್ದು, ಇಂದು 11 ಗಂಟೆಗೆ ವಿಚಾರಣೆ ಬರಲು ಸೂಚಿಸಲಾಗಿದೆ.

ಇದನ್ನೂ ಓದಿ : ನಮ್ಮ ಮೆಟ್ರೋ ಕಾಮಗಾರಿ ವೇಳೆ ನಿರ್ಲಕ್ಷ್ಯ – ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More