ಚಿಕ್ಕಬಳ್ಳಾಪುರ : ಗೌರಿಬಿದನೂರು ನಗರಕ್ಕೆ ಕುಡಿಯುವ ನೀರಿಗೆ ವಾಟದಹೊಸಳ್ಳಿ ಕೆರೆ ನೀರನ್ನು ಬಳಸಿಕೊಳ್ಳಲು ತಯಾರಿ ಮಾಡಕೊಳ್ಳಲಾಗಿದ್ದು, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಅವರ ನೇತೃತ್ವದಲ್ಲಿ ಕೆರೆ ನೀರನ್ನು ಬಳಸಿಕೊಳ್ಳಲು ಡಿಪಿಆರ್ ಸಿದ್ದಪಡಿಸಲಾಗಿದೆ. ಈ ಸಂಬಂಧ ಇದೀಗ MLA ಪುಟ್ಟಸ್ವಾಮಿ ಗೌಡ ವಿರುದ್ದ ಆಕ್ರೋಶ ಭುಗಿಲೆದ್ದಿದೆ.

ವಾಟದಹೊಸಳ್ಳಿ ಕೆರೆ ನೀರು ಉಳಿವಿಗಾಗಿ ವಾಟದಹೊಸಳ್ಳಿಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ನಿನ್ನೆ ವಾಟದಹೊಸಳ್ಳಿ ಕೆರೆ ಅಚ್ಚುಕಟ್ಟುದಾರರ ಹೋರಾಟ ಸಮಿತಿಯಿಂದ ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸಾವಿರಾರೂ ಮಂದಿ ರೈತರು ವಾಟದಹೊಸಳ್ಳಿ ಕೆರೆಯಿಂದ ವಾಟದಹೊಸಳ್ಳಿ ಗ್ರಾಮದವರೆಗೆ ಸುಮಾರು 5 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿದ್ದು, ಹಸಿರು ಶಾಲುಗಳನ್ನು ತಿರುಗಿಸಿ ಶಾಸಕ ಪುಟ್ಟಸ್ವಾಮಿಗೌಡ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಯಾವುದೇ ಕಾರಣಕ್ಕೂ ನಮ್ಮ ಕೆರೆ ನೀರನ್ನು ಬೇರೆ ಕಡೆ ಹರಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇನ್ನು ಶಾಸಕ ಪುಟ್ಟಸ್ವಾಮಿಗೌಡ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು, ನಮ್ಮ ಕೆರೆ ನಮ್ಮ ಹಕ್ಕು ಎಂಬ ಘೋಷ ವಾಕ್ಯದಲ್ಲಿ ಹೋರಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್.. KKR ವಿರುದ್ಧ 111 ರನ್ಗಳ ಗುರಿಯನ್ನು ಡಿಫೆಂಡ್ ಮಾಡಿ ಗೆದ್ದ ಶ್ರೇಯಸ್ ಪಡೆ!







