ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಜಾತಿ ಜನ ಗಣತಿ ವರದಿ ವಿಚಾರ ತೀವ್ರ ಸಂಚಲನ ಸೃಷ್ಟಿಸಿದೆ. ಪರ ವಿರೋಧ ಚರ್ಚೆ ಜೋರಾಗುತ್ತಿದೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಬಾಲು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಒಕ್ಕಲಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಬಾಲು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಮಾತನಾಡಿದ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಮ್ಮ ಸಮುದಾಯದ ಎಲ್ಲಾ ಶಾಸಕರ ಸಭೆ ಕರೆದಿದ್ದಾರೆ. ಸರ್ಕಾರವು ನಮ್ಮ ಜನಾಂಗ ಸಮಪಾಲು ಸಮ ಬಾಳು ಎಂಬ ಮನೋಭಾವವನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕೆಂಡ ಕಾರಿದರು.
ನಮ್ಮ ಸಮುದಾಯ ಹೋರಾಟಕ್ಕೆ ನಿಂತರೆ ಸರ್ಕಾರಗಳು ಉರುಳಿ ಹೋಗಿರುವ ಉದಾಹರಣೆಗಳಿವೆ. ಸರ್ಕಾರದ ಮುಖ್ಯಮಂತ್ರಿಗೆ ಕೊಡುತ್ತಿರುವ ಸಂದೇಶ ಇದು. ಈ ವರದಿ ಜಾರಿ ಮಾಡಿದ್ರೆ ಸರ್ಕಾರ ಬಿದ್ದೇ ಬೀಳುತ್ತೆ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಉಪ ಪಂಗಡಗಳಿಂದ ವೀರಶೈವ ಜನಸಂಖ್ಯೆ ಕಡಿಮೆ ಆಗಿರಬಹುದು – ಜಾತಿ ಗಣತಿ ವರದಿ ಬಗ್ಗೆ ಸಚಿವೆ ಹೆಬ್ಬಾಳ್ಕರ್ ರಿಯಾಕ್ಟ್!
