ಬೆಂಗಳೂರು : ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಬೆಂಗಳೂರಿನಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 1ಕೆಜಿ MDMA ಕ್ರಿಸ್ಟಲ್, 10 ಮೊಬೈಲ್ ಫೋನ್, 1 ಲ್ಯಾಪ್ಟಾಪ್, ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಯಲಹಂಕದ ಲಾಡ್ಜ್ ವೊಂದರಲ್ಲಿ ಮಾದಕ ವಸ್ತು ಮಾರಾಟ ಮಾಡ್ತಿದ್ದ ಕೇರಳ ಮೂಲದ 8 ಡ್ರಗ್ ಪೆಡ್ಲರ್ಗಳ ಬಗ್ಗೆ ಸಿಸಿಬಿ ಮಾಹಿತಿ ಸಂಗ್ರಹಿಸಿದ್ದು, ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಲಾಡ್ಜ್ಗೆ ದಾಳಿ ಮಾಡಿ 8 ಜನ ಡ್ರಗ್ಸ್ ಪೆಡ್ಲರ್ಸ್ ಅರೆಸ್ಟ್ ಮಾಡಿದ್ದಾರೆ. ಇನ್ನು ಕಾರ್ಯಾಚರಣೆ ವೇಳೆ ಬರೋಬ್ಬರಿ 27 ಲಕ್ಷ ಮೌಲ್ಯದ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಲಾಗಿದೆ.
ಆರೋಪಿಗಳು ಕೇರಳದವರಾಗಿದ್ದು, ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ರು. ಮೋಜಿನ ಜೀವನ ನಡೆಸುವ ಸಲುವಾಗಿ ಡ್ರಗ್ ಪೆಡ್ಲಿಂಗ್ ಮಾಡ್ತಿದ್ರು. ಕಾಲೇಜು ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ 15 ರಿಂದ 25 ಸಾವಿರ ರೂಪಾಯಿಗೆ MDMA ಟ್ಯಾಬ್ಲೆಟ್ ಮಾರಾಟ ಮಾಡ್ತಿದ್ರು. ಸದ್ಯ ಸಿಸಿಬಿ ಆರೋಪಿಗಳನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ : ನಟಿ ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಪ್ರಪೋಸಲ್ – ಉದ್ಯಮಿ ‘ಅಕಾಯ್’ ಪ್ರೀತಿ ನಿವೇದನೆ ಒಪ್ಪಿದ್ದು ಹೇಗೆ?
