ನಟಿ ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಪ್ರಪೋಸಲ್ – ಉದ್ಯಮಿ ‘ಅಕಾಯ್’ ಪ್ರೀತಿ ನಿವೇದನೆ ಒಪ್ಪಿದ್ದು ಹೇಗೆ?

ನಟಿ ವೈಷ್ಣವಿ ಗೌಡ ಅವರು ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದ್ದು, ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ನಿಶ್ಚಿತಾರ್ಥ ಆಗಿರೋದು ಅಭಿಮಾನಿಗಳಿಗೆ ಶಾಕ್ ಹಾಗೂ ಖುಷಿ ಎರಡನ್ನೂ ನೀಡಿದೆ. ನವ ಜೋಡಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ.

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್​ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅಕಾಯ್​​ ಎಂಬ ಉದ್ಯಮಿ ಜೊತೆ ನಟಿ ಎಂಗೇಜ್​​ಮೆಂಟ್​ ಮಾಡಿಕೊಂಡಿದ್ದಾರೆ.

ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಆಫರ್ : ವೈಷ್ಣವಿ ಗೌಡ ಅವರು ಬಿಗ್ ಬಾಸ್​ ಸೀಸನ್ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗಿತ್ತು. ಕೊವಿಡ್ ಬಂದ ಕಾರಣ ಬಿಗ್ ಬಾಸ್​ನ ಅರ್ಧಕ್ಕೆ ನಿಲ್ಲಿಸಿ ಆ ಬಳಿಕ ಮತ್ತೆ ಶುರು ಮಾಡಲಾಗಿತ್ತು. ಮನೆಗೆ ಹೋಗಿ ಬಂದ ಗ್ಯಾಪ್​ನಲ್ಲಿ ವೈಷ್ಣವಿಗೆ ಭರ್ಜರಿ ಮದುವೆ ಆಫರ್​ಗಳು ಬಂದಿದ್ದವು.

‘43 ದಿನ ಹೊರಗಡೆ ಇದ್ರಿ, ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು’ ಎಂದು ವೇದಿಕೆ ಮೇಲೆ ಕಿಚ್ಚ ಸುದೀಪ್ ಕೇಳಿದ್ದರು. ಆಗ ವೈಷ್ಣವಿ, ‘200ರಿಂದ 300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಸಾರ್’ ಎಂದು ವೈಷ್ಣವಿ ಹೇಳಿದ್ದರು. ‘ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ’ ಎಂದಿದ್ದರು. ಈಗ ಅಕಾಯ್ ವೈಬ್​ಗೆ ವೈಷ್ಣವಿ ಕನೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಅವರು ಮದುವೆ ಆಗಲು ಒಪ್ಪಿದ್ದಾರೆ.

ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಅಕಾಯ್, ತಮ್ಮದೇ ಆದ ಉದ್ಯಮ ಹೊಂದಿದ್ದಾರೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ. ಸದ್ಯ ನಟಿ ಸೀತಾರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸೀರಿಯಲ್​ನಲ್ಲಿ ನಟಿ ವೈಷ್ಣವಿ ಗೌಡ ಸೀತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಅಭಿಮಾನಿಗಳು ವೈಷ್ಣವಿ ಗೌಡ ಅವರ ನಟನೆಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ : ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ – ಹುಡುಗ ಯಾರು ಗೊತ್ತಾಯ್ತಾ?

Btv Kannada
Author: Btv Kannada

Read More