ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷಗಳು ಸಂದಿವೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ವಿವಿಧ ಭಾಷೆಯ ಕಲಾವಿದರಿಂದ ಸುದೀಪ್ 30 ವರ್ಷದ ಸಿಡಿಪಿಯನ್ನ ರಿಲೀಸ್ ಮಾಡಿಸುತ್ತಿದ್ದಾರೆ.

ಕೇವಲ ಸಿನಿಮಾ ರಂಗ ಮಾತ್ರವಲ್ಲದೆ, ರಾಜಕೀಯ ಮತ್ತು ಕ್ರೀಡಾ ಲೋಕದ ದಿಗ್ಗಜರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಸಿಎಂ ಸಿದ್ದರಾಮಯ್ಯ ಅವರು ಸಿಡಿಪಿಯನ್ನ ಬಿಡುಗಡೆ ಮಾಡಲಿದ್ದಾರೆ. ಸುದೀಪ್ 30 ವರ್ಷ ಸಿನಿ ಜರ್ನಿಗೆ ಸಿಎಂ ಸಿದ್ದರಾಮಯ್ಯ, ಶಿವರಾಜ್ ಕುಮಾರ್, ವೀರೇಂದ್ರ ಹೆಗ್ಡೆ ಶುಭ ಹಾರೈಸಲಿದ್ದಾರೆ. ಇನ್ನು ಸುನೀಲ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ, ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್, ದೇವಿ ಶ್ರೀ ಪ್ರಸಾದ್, ಧ್ರುವ ಸರ್ಜಾ, ಪ್ರತಾಪ್ ಸಿಂಹ, ಜೆನಿಲಿಯಾ ಸೇರಿದಂತೆ ಸಿನಿಮಾದ ಹಲವು ದಿಗ್ಗಜರು ರಾಜಕೀಯ ಗಣ್ಯರು, ಕ್ರಿಕೆಟರ್ಗಳಿಂದ ಸುದೀಪ್ CDP ಸ್ಪೆಷಲ್ ಪೋಸ್ಟರ್ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಸಿಡಿಪಿಯನ್ನ ಇಂದು ಸಂಜೆ 6 ಗಂಟೆಗೆ ರಿಲೀಸ್ ಮಾಡುತ್ತಿದ್ದಾರೆ. ಸುದೀಪ್ ತಮ್ಮ ಚಿತ್ರ ಜೀವನದಲ್ಲಿ ಎಲ್ಲ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣದ ಮೂರು ಭಾಷೆಯ ಚಿತ್ರಗಳಲ್ಲೂ ಸುದೀಪ್ ತಮ್ಮ ಛಾಪು ಮೂಡಿಸಿದ್ದಾರೆ. 1997 ರಿಂದ ಇಲ್ಲಿವರೆಗೂ ಸುದೀಪ್ ಹೆಚ್ಚು ಕಡಿಮೆ ಸುಮಾರು 76 ಚಿತ್ರಗಳಲ್ಲಿ ನಟಿಸಿದ್ದಾರೆ.

ನಟ ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯಕ್ಕಾಗಿ ಕೊಯಮತ್ತೂರ್ನಲ್ಲಿದ್ದು, ಇಂದಿನ ಸೆಮಿಫೈನಲ್ ಗೆದ್ದು ಕರ್ನಾಟಕ ಬುಲ್ಡೋಜರ್ ತಂಡ ಕಿಚ್ಚನಿಗೆ ಗಿಫ್ಟ್ ಕೊಡಲು ಸಜ್ಜಾಗಿದೆ.







