ಅಜಯ್ ಮೂವೀಸ್ ಸಂಸ್ಥೆಗೆ ಶುಭಕೋರಿದ ಅಶ್ವಿನಿ ಪುನೀತ್ ರಾಜ್​ಕುಮಾರ್!

ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಮೊದಲಿನಿಂದಲೂ ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಅವರ ಕುಟುಂಬ ಪ್ರೋತ್ಸಾಹ ನೀಡುತಾ ಬಂದಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಅಜಯ್ ಮೂವೀಸ್ ಎಂಬ ನೂತನ ಸಂಸ್ಥೆಯನ್ನು ನಿರ್ಮಾಪಕಿ ಮಮತ‌ ಅಮಿನ್ ಅವರು ಆರಂಭಿಸಿದ್ದಾರೆ ಹಾಗೂ ಅಜಯ್ ಸಾಗರ್ ಅವರ ನಿರ್ದೇಶನದಲ್ಲಿ “ಪ್ರೊಡಕ್ಷನ್ ನಂ1” ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ನೂತನ ಚಿತ್ರತಂಡದ ಸದಸ್ಯರು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಜಯ್ ಮೂವೀಸ್ ಸಂಸ್ಥೆಗೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದ್ದಾರೆ. ನಿರ್ಮಾಪಕಿ ಮಮತ ಅಮಿನ್, ನಿರ್ದೇಶಕ ಅಜಯ್ ಸಾಗರ್, ಛಾಯಾಗ್ರಾಹಕ ಮನೀಶ್ ಬಂಗೇರ, ನವಯುಗ ಹೋಟೆಲ್ ನ ಮಾಲೀಕರಾದ ಮಾರುತಿ ಸಾಲಿಗ್ರಾಮ, ಕಾರ್ಯಕಾರಿ ನಿರ್ಮಾಪಕ ಪ್ರತಾಪ್ ಸಾಲಿಗ್ರಾಮ ಹಾಗೂ ಪಿ.ಆರ್.ಕೆ ಸಂಸ್ಥೆಯ ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಮ್ಮ ಅಜಯ್ ಮೂವೀಸ್ ಸಂಸ್ಥೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶುಭಕೋರಿದ್ದು ಬಹಳ ಸಂತೋಷವಾಗಿದೆ. ನಮಗೆ ಡಾ. ರಾಜ್​ಕುಮಾರ್, ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಆಶೀರ್ವಾದ ಸಿಕ್ಕಷ್ಟೇ ಖುಷಿಯಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ನಿರ್ಮಾಪಕಿ ಮಮತ ಅಮಿನ್ ಹಾಗೂ ನಿರ್ದೇಶಕ ಅಜಯ್ ಸಾಗರ್ ಧನ್ಯವಾದ ತಿಳಿಸಿದರು.

ಅಜಯ್ ಮೂವೀಸ್ ಮೂಲಕ “ಪ್ರೊಡಕ್ಷನ್ ನಂ 1” ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.

Btv Kannada
Author: Btv Kannada

Read More