ಐಷಾರಾಮಿ ಕಾರು ಖರೀದಿಸಿದ ನಟ ರಿಷಬ್‌ ಶೆಟ್ಟಿ.. ಇದರ ಬೆಲೆ ಎಷ್ಟು ಕೋಟಿ ಗೊತ್ತಾ?

ಬೆಂಗಳೂರು : ‘ಕಾಂತಾರ’ ಸಿನಿಮಾ ಸಕ್ಸಸ್‌ ಬೆನ್ನಲ್ಲೇ ‘ಕಾಂತಾರ’ ಚಾಪ್ಟರ್ 1 (ಪ್ರಿಕ್ವೆಲ್) ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಿಷಬ್ ಶೆಟ್ಟಿ ಮತ್ತವರ ಪತ್ನಿ ಇಬ್ಬರು ಮಕ್ಕಳು ಸೇರಿ ಕುಟುಂಬ ಸಮೇತ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಹೌದು, ರಿಷಬ್ ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಸುಮಾರು ಒಂದೂವರೆಗೆ ಕೋಟಿ ರೂಪಾಯಿ ಬೆಲೆ ಬಾಳುವ ಟೊಯೋಟಾ ಐಷಾರಾಮಿ ಕಾರನ್ನು ರಿಷಬ್ ಶೆಟ್ಟಿ ಅವರು ಖರೀದಿಸಿದ್ದಾರೆ. ಹೊಚ್ಚ ಹೊಸ ಕಾರಿನ ಖರೀದಿ ಜೊತೆಗೆ ಅವರ ಮನೆಯಲ್ಲಿ ಸಂತಷ ಇನ್ನೂ ಹೆಚ್ಚಾಗಿದೆ. ಕಪ್ಪು ಬಣ್ಣದ ಟೊಯೋಟಾ ವೆಲ್ಫೈರ್ ಕಾರು ಇದಾಗಿದ್ದು, ಇದರ ಆನ್‌ರೋಡ್ ಬೆಲೆ ಬರೋಬ್ಬರಿ 1.40 ಕೋಟಿ ರೂಪಾಯಿ ಎನ್ನಲಾಗುತ್ತಿದೆ.

ಇನ್ನು, ಈ ಹೊಸ ಟೊಯೋಟಾ ವೆಲ್ಫೈರ್ ಕಾರನ್ನ ಯಲಹಂಕ ಆರ್‌ಟಿಓನಲ್ಲಿ ನೋಂದಣಿ ಮಾಡಿಸಲಾಗಿದೆ. ಕಾರಿನ ನಂಬರ್ ಕೆಎ 50 ಎಂಇ 6669 ಎಂದಿದೆ. ಈ ಫ್ಯಾನ್ಸಿ ನಂಬರ್ ಪಡೆಯಲು ರಿಷಬ್ ಹೆಚ್ಚುವರಿ ಶುಲ್ಕ ನೀಡಿರುವ ಸಾಧ್ಯತೆ ಇದೆ. ನಿನ್ನೆ ಕಾರಿಗೆ ಪೂಜೆ ನೆರವೇರಿಸಿ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಸುತ್ತಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇನ್ನು ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಲ್ಲಿ ನಡೆದ ವಾರಾಹಿ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ದರು. ನೇಮಕ್ಕೆ ಬಂದು ದೈವದ ಬಳಿ ಬೇಡಿಕೊಂಡಿದ್ದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ಅಭಯ ನೀಡಿತ್ತು. ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ಅವರಿಗೆ ನಿನಗೆ ಜಗತ್ತಿನೆಲ್ಲೆಡೆ ದುಶ್ಮನ್‌ಗಳಿದ್ದಾರೆ. ನಿನ್ನ ಸಿನಿಮಾ ಎಂಬ ಸಂಸಾರವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ. ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ದೈವ ಅಭಯ ನೀಡಿತ್ತು.

ಇದನ್ನೂ ಓದಿ : ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಟ್ರೇಲರ್‌ ಔಟ್.. ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ!

Btv Kannada
Author: Btv Kannada

Read More