ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಫಸ್ಟ್ ಟೈಮ್ ಅತೀ ಹೆಚ್ಚು ಮತಗಳನ್ನ ಪಡೆಯುವ ಮೂಲಕ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
ಬಿಗ್ಬಾಸ್ ವಿನ್ನರ್ ಅನೌನ್ಸ್ಗೂ ಮೊದಲೇ ಶಾಕಿಂಗ್ ವಿಷಯವೊಂದು ಹೊರಬಂದಿತ್ತು. ಅದೇನೆಂದರೆ, ಯಾರೇ ವಿನ್ ಆದರೂ ಅವರು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದು ಸಂಭ್ರಮ ಆಚರಿಸುವಂತಿಲ್ಲ. ಅವರು ಮನೆಯಲ್ಲಿಯೇ ಲಾಕ್ ಆಗಿ ಇರುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿತ್ತು. ಗಿಲ್ಲಿ ನಟ ವಿನ್ ಆದರಂತೂ ಹೌಸ್ ಅರೆಸ್ಟ್ ಆಗಿಯೇ ಇರಬೇಕು ಎಂದು ರಾಮನಗರ ಎಸ್ಪಿ, ಬಿಗ್ಬಾಸ್ ಆಡಳಿತ ಮಂಡಳಿಗೆ ಸೂಚನೆ ಕೊಟ್ಟಿದ್ದರು.
ಕಾರಣವೇನೆಂದರೆ ಬಿಗ್ಬಾಸ್ ಮನೆಯ ಹೊರಗೆ ಸಹಸ್ರಾರು ಮಂದಿ ಅಭಿಮಾನಿಗಳು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಅದರಲ್ಲಿಯೂ ಗಿಲ್ಲಿ ನಟನೇ ವಿನ್ ಆಗಿದ್ದಕ್ಕೆ ಹುಚ್ಚಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿದೆ. ಹಾಗಾಗಿ ಯಾವುದಕ್ಕೂ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು ಎನ್ನುವ ಕಾರಣಕ್ಕೆ ಗೆದ್ದ ಸ್ಪರ್ಧಿ ಸಂಭ್ರಮ ಆಚರಿಸುವಂತಿಲ್ಲ. ಇಂದು ಬೆಳಿಗ್ಗೆಯವರೆಗೂ ಸುರಕ್ಷತೆಯ ದೃಷ್ಟಿಯಿಂದ ಬಿಗ್ಬಾಸ್ ಮನೆಯಲ್ಲಿಯೇ ಅರೆಸ್ಟ್ ಆಗಿ ಇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಟ್ರೇಲರ್ನಲ್ಲೇ ಕುತೂಹಲ ಮೂಡಿಸಿದ “ಕಲ್ಟ್” – ಝೈದ್ ಖಾನ್ ನಟನೆಯ ಸಿನಿಮಾ ಜ.23ಕ್ಕೆ ರಿಲೀಸ್!







