ಎನ್. ಜ್ಯೋತಿಲಕ್ಷ್ಮಿ ನಿರ್ದೇಶನದ ‘ಬಯಕೆಗಳು ಬೇರೂರಿದಾಗ’ ಚಿತ್ರ ಫೆ.6ಕ್ಕೆ ರಿಲೀಸ್!

“ಮದುವೆ ಸ್ವರ್ಗದಲ್ಲಿ ನಿಶ್ಚಯ” ಎನ್ನುವ ನಂಬಿಕೆಗೆ ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ ದಾಖಲಾದ 1.7 ಲಕ್ಷ ವಿಚ್ಛೇದನ ದಾವೆಗಳು ಸವಾಲಾಗಿಸಿವೆ. ಸ್ವರ್ಗ ಬಂಧನಕ್ಕೆ ಮುದ್ರೆ ಹಾಕಬಹುದು, ಆದರೆ ಆ ಬಂಧನವನ್ನು ಪೋಷಿಸುವುದು ನಮ್ಮ ಕೈಯಲ್ಲಿದೆ. ವಿಶಾಲ ಸಂಸ್ಕಾರ, ಸಾಮಾಜಿಕ ಒತ್ತಡಗಳ ನಡುವೆ ಸಂವಾದ, ತಾಳ್ಮೆ, ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ.

ಇಂತಹ ಸಂದರ್ಭದಲ್ಲಿ, ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಕಾದಂಬರಿ ಮತ್ತು ಎನ್. ಜ್ಯೋತಿಲಕ್ಷ್ಮಿ ಅವರ ನಿರ್ದೇಶನದ ಸದ್ಯಕ್ಕೆ 25 ಪ್ರಶಸ್ತಿ ಪಡೆದ ಚಲನಚಿತ್ರವು ಪ್ರಸ್ತುತವಾಗಿದೆ. ಕುಟುಂಬ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕಥೆ, ಸಮಸ್ಯೆಗಳಿಗೆ ದಾರಿ ಹುಡುಕುವಾಗ ಮಹತ್ವದ ಸಂದೇಶ ನೀಡಬಲ್ಲದು.

ಫೆಬ್ರವರಿ 6ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೋಡುವುದು ಅಥವಾ ನಿಮ್ಮ ಸುತ್ತಮುತ್ತಲಿನವರಿಗೆ ತಿಳಿಸುವುದು, ಸಂಬಂಧಗಳ ಬಗೆಗೆ ಆಳವಾಗಿ ಯೋಚಿಸುವ ಪ್ರೇರಣೆಯಾಗಬಹುದು. ಸ್ವರ್ಗೀಯ ‘ನಿಶ್ಚಯ’ವನ್ನು ಭೂಮಿಯ ‘ನಿಭಾವಣೆ’ಯಿಂದ ಪೂರ್ಣಗೊಳಿಸಲು, ಇಂತಹ ಕಲಾತ್ಮಕ ಪ್ರಯತ್ನಗಳು ದೀಪಸ್ತಂಭಗಳಾಗಬಲ್ಲವು.

ಇದನ್ನೂ ಓದಿ : ಹೊಸ ಲುಕ್‌ನಲ್ಲಿ ವಿಜಯ ರಾಘವೇಂದ್ರ – ಸಂಕ್ರಾಂತಿ ಹಬ್ಬಕ್ಕೆ ಅನಾವರಣವಾಯಿತು “ಮಹಾನ್” ಚಿತ್ರದ ಫಸ್ಟ್ ಲುಕ್!

Btv Kannada
Author: Btv Kannada

Read More