ಕಥಾ ಸಂಗ್ರಹವನ್ನು ಹೊಂದಿರುವ “ಏಕಂ” ಎಂಬ ವೆಬ್ ಸರಣಿ ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ. “ಏಕಂ” ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.

ಈ ವೆಬ್ ಸರಣಿಯು ಬಹು ತಾರಾಗಣವನ್ನು ಹೊಂದಿದೆ. ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ, ಶೈನ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಕಿಶೋರ್ ಕುಮಾರ್ ಜಿ ಮುಂತಾದವರು ನಟಿಸಿರುವ ಈ ಕಥಾ ಸಂಗ್ರಹವನ್ನು ಸುಮಂತ್ ಭಟ್, ಶಂಕರ್ ಗಂಗಾಧರನ್, ವಿವೇಕ್ ವಿನೋದ್, ಜಿಷ್ಣು ಚಟರ್ಜಿ, ಸ್ವರೂಪ್ ಎಲಾಮನ್ ಮತ್ತು ಸನಲ್ ಅಮನ್ ನಿರ್ದೇಶಿಸಿರುತ್ತಾರೆ.

ನಟ ರಕ್ಷಿತ್ ಶೆಟ್ಟಿಯ “ಪರಂವಃ ಸ್ಟೂಡಿಯೋಸ್” ನಿರ್ಮಾಣದ “ಏಕಂ” ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.
ಇದನ್ನೂ ಓದಿ : ಮೂರನೇ ವಾರವೂ ‘ಮಾರ್ಕ್’ ಮೇನಿಯಾ – ಬರೋಬ್ಬರಿ 51 ಕೋಟಿ ಬಾಚಿದ ಕಿಚ್ಚನ ಸಿನಿಮಾ!
Author: Btv Kannada
Post Views: 231







