ಇತ್ತೀಚೆಗೆ ಎವಿಆರ್ ರೆಡ್ಡಿ ಮತ್ತು ಖ್ಯಾತ ನಟಿ ನಡುವಿನ ಗಲಾಟೆ ಪ್ರಕರಣ ಭಾರೀ ಸುದ್ದಿಯಾಗಿತ್ತು, ಇದೀಗ ಈ ಕೇಸ್ ಮತ್ತೆ ಸದ್ದು ಮಾಡ್ತಿದೆ. ನಟಿ ಮತ್ತು ಎವಿಆರ್ ರೆಡ್ಡಿ ತುಂಬಾ ಆತ್ಮೀಯವಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಎವಿಆರ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ನನ್ನ ಪಾಡಿಗೆ ನನ್ನನ್ನು ಬಿಡುತ್ತಿಲ್ಲ ಎಂದು ಆರೋಪಿಸಿದ್ದರು. ಈಗ ಎವಿಆರ್ ರೆಡ್ಡಿ ಮತ್ತು ನಟಿ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ನಟಿಗೆ ಎವಿಆರ್ ರೆಡ್ಡಿ ಲಕ್ಷಾಂತರ ಹಣ ಮತ್ತು ಲಕ್ಷಾಂತರ ಮೌಲ್ಯದ ವಸ್ತುಗಳು ಕೊಟ್ಟಿರೋ ಬಗ್ಗೆಯೂ ಸ್ಕ್ರೀನ್ ಶಾಟ್ಗಳು ವೈರಲ್ ಆಗಿವೆ. ಲಕ್ಷಾಂತರ ಬೆಲೆಬಾಳುವ ಜ್ಯುವಲೆರಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫರ್ನೀಜರ್ಸ್, ಫ್ಲೈಟ್ ಟಿಕೆಟ್ಸ್, ಅಕೌಂಟ್ ಸ್ಟೇಟ್ಮೆಂಟ್ಸ್ ಹೀಗೆ ಅನೇಕ ವಿಚಾರಗಳು ವೈರಲ್ ಆಗಿದೆ.

ಸರಿಸುಮಾರು ಒಂದು ಕೋಟಿ ಹಣ ಕೊಟ್ಟಿದ್ದೆ ಎಂದು ಎವಿಆರ್ ರೆಡ್ಡಿ ಹೇಳಿಕೊಂಡಿದ್ದಾರೆ. ಸುದ್ಧಿಗೋಷ್ಠಿ ನಡೆಸಿ ಕೆಲವೊಂದು ವಿಚಾರಗಳನ್ನು ಎವಿಆರ್ ರೆಡ್ಡಿ ಹೇಳಿಕೊಂಡಿದ್ದ. ಹಾಗೂ ನಟಿ ಮಾಡಿದ್ದ ಕೆಲವೊಂದು ಆರೋಪಗಳನ್ನು ರೆಡ್ಡಿ ತಳ್ಳಿ ಹಾಕಿದ್ದ.

ಇದೀಗ ಸೆಲೆಬ್ರೇಷನ್ಸ್ ಫೋಟೋಸ್, ಇಬ್ಬರು ಜೊತೆಗಿರುವ ಫೋಟೋಸ್ ವೈರಲ್ ಆಗಿವೆ. 7 ಲಕ್ಷ ಬೆಲೆಬಾಳುವ ಲೈಟ್ಸ್, ಟಿವಿ, 33 ಸಾವಿರ ಬೆಲೆ ಬಾಳುವ ಡೈನಿಂಗ್ ಸೆಟ್, 1.30 ಲಕ್ಷ ಬೆಲೆ ಬಾಳುವ ಹಾಸಿಗೆ, 10 ಲಕ್ಷ ಬೆಲೆ ಬಾಳುವ ಫರ್ನಿಚರ್ಸ್, 15 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ, 1 ಲಕ್ಷದ ವರೆಗು ಓಡಾಡಿರುವ ಫ್ಲೈಟ್ ಟಿಕೇಟ್ಸ್ ವೈರಲ್ ಆಗಿವೆ. ಇದೆಲ್ಲವು ಅರವಿಂದ್ ರೆಡ್ಡಿ ಯಿಂದ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ‘ಟಾಕ್ಸಿಕ್’ ಟೀಸರ್ ಅಬ್ಬರ – ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮಿಮ್ಸ್ಗಳ ಸುರಿಮಳೆ!







