‘ಟಾಕ್ಸಿಕ್’ ಟೀಸರ್ ಅಬ್ಬರ – ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮಿಮ್ಸ್​ಗಳ ಸುರಿಮಳೆ!

ನಟ ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾ ಟೀಸರ್ ಬಿಡುಗಡೆಯಾಗಿ 24 ಗಂಟೆಯಲ್ಲೇ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀಕ್ಷಣೆ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಫೇಸ್ಬುಕ್, ಎಕ್ಸ್, ಇನ್ ಸ್ಟಾ, ಯೂಟ್ಯೂಬ್, ಹೀಗೆ ಎಲ್ಲಾ ಸೋಶಿಯಲ್ ಪ್ಲಾಟ್ ಫಾರಂಗಳಲ್ಲೂ ಟಾಕ್ಸಿಕ್ ನದ್ದೇ ಸುದ್ದಿ. ಮೀಮ್ಸ್, ಟ್ರೋಲ್ ಪೇಜಸ್​ಗಳು ಟಾಕ್ಸಿಕ್ ಟೀಸರ್​ನ ಬಳಸಿಕೊಂಡು ಸಿಕ್ಕಾಪಟ್ಟೆ ಕಂಟೆಂಟ್ ಕ್ರಿಯೇಟ್ ಮಾಡ್ತಿವೆ. ರಿಸೆಂಟ್ ಟೈಮ್​ನಲ್ಲಿ ಯಾವ ಸಿನಿಮಾ ಟೀಸರ್ ಸಹ ಇಷ್ಟೊಂದು ಕಂಟೆಂಟ್ ಕೊಟ್ಟಿರಲಿಲ್ವೆನೋ ಎಂಬಂತೆ ಮಲಗಿದ್ದವರೆಲ್ಲಾ ಎದ್ದು ಆಕ್ಟಿವ್ ಆಗಿದ್ದಾರೆ.

ಟಾಕ್ಸಿಕ್ ಟೀಸರ್​ನಲ್ಲಿ ಕಾರ್ ಎಪಿಸೋಡ್ ಅಂತೂ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದ್ದು, ವಿಶೇಷ ರೀತಿಯಲ್ಲಿ ಡೈನಾಮೇಟ್ ಬ್ಲಾಸ್ಟ್ ಮಾಡಿರೋ ರೀತಿಯನ್ನ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಾ ಇದ್ದಾರೆ. ಇನ್ನು ಟಾಕ್ಸಿಕ್ ಟೀಸರ್ ನೋಡಿದ್ಮೇಲೆ ರಾಧಿಕಾ ರಿಯಾಕ್ಷನ್ ಹೇಗಿರಬಹುದು ಅನ್ನೋದನ್ನ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದ ದೃಶ್ಯಗಳನ್ನು ಬಳಸಿಕೊಂಡು ಟ್ರೋಲ್ ಮಾಡಲಾಗ್ತಿದೆ.

ಡ್ರಾಮಾ ಮೂವಿ ಸೀನ್ಸ್, ಕಿರಾತಕ ಮೂವಿ ಸೀನ್ಸ್, ಗಜಕೇಸರಿ ಮೂವಿ ಸೀನ್ಸ್ ಹೀಗೆ ಯಶ್ ನಟನೆಯ ಸಿನಿಮಾಗಳನ್ನೇ ಬಳಸಿಕೊಂಡು ಮಾಡಿರೋ ಟ್ರೋಲ್ ವೀಡಿಯೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇದನ್ನೂ ಓದಿ : ಬಿಗ್ ಬಾಸ್ ಬೆನ್ನಲ್ಲೇ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ – ಕಲರ್ಸ್ ಕನ್ನಡದ ಮುಂದಿನ ಪ್ಲಾನ್ ಏನು?

Btv Kannada
Author: Btv Kannada

Read More