ಬಿಗ್ ಬಾಸ್ ಬೆನ್ನಲ್ಲೇ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ – ಕಲರ್ಸ್ ಕನ್ನಡದ ಮುಂದಿನ ಪ್ಲಾನ್ ಏನು?

ಬಿಗ್ ಬಾಸ್ ಕನ್ನಡ ಫಿನಾಲೆ ಹತ್ತಿರವಾಗುತ್ತಿದ್ದು, ಈ ಬಾರಿ ಕಪ್ ಗೆಲ್ಲೋರು ಯಾರು ಅನ್ನೋ ಕುತೂಹಲ ಪ್ರೇಕ್ಷಕರಲ್ಲಿದೆ. ಇನ್ನೊಂದ್ಕಡೆ ಬಿಗ್ ಬಾಸ್ ಮುಗಿದ್ಮೇಲೆ ಮುಂದೇನು ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಹೌದು.. ಬಿಗ್‌ಬಾಸ್ ಮುಗಿಯುತ್ತಿದೆಯಲ್ಲಾ ಅನ್ನೋ ಕೊರಗು ಹಲವು ವೀಕ್ಷಕರಲ್ಲಿದೆ. ಪ್ರತಿ ವರ್ಷ ಬಿಗ್‌ಬಾಸ್ ಮುಗಿಯುವಾಗ ವೀಕ್ಷಕರು ಇದೇ ರೀತಿ ಫೀಲ್ ಮಾಡ್ತಾರೆ. ಈ ಬಾರಿ ಕಲರ್ಸ್​ ಕನ್ನಡ ಭರ್ಜರಿಯಾಗಿಯೇ ಪ್ಲಾನ್ ಮಾಡಿದ್ದು, ವೀಕೆಂಡ್‌ನಲ್ಲಿ ನಕ್ಕು ನಲಿಸಲು ಗಿಚ್ಚಿಗಿಲಿಗಿಲಿ ತಂಡ ಬರ್ತಿದೆ. ಈ ಬಾರಿ ನಗಿಸೋಕೆ ಬರ್ತಿರೋರು ಪುಟಾಣಿಗಳು ಅನ್ನೋದೇ ಸ್ಪೆಷಲ್‌.

ಈ ಬಾರಿ ರಾಜ್ಯಾದ್ಯಂತ ಆಡಿಷನ್ ನಡೆಸಿ, ಹಲವು ಮಕ್ಕಳನ್ನ ಸೆಲೆಕ್ಟ್ ಮಾಡಲಾಗಿದೆ. ಆ ಪುಟಾಣಿಗಳೆಲ್ಲಾ ಮೊದಲ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 6 ರಿಂದ 10 ವರ್ಷದೊಳಗಿನ ಮಕ್ಕಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಕೇವಲ ಮಕ್ಕಳು ಮಾತ್ರವಲ್ಲ, ಸೀನಿಯರ್ಸ್ ಕೂಡ ಇರ್ತಾರೆ. ದೊಡ್ಡವರು ಮತ್ತು ಪುಟಾಣಿಗಳು ಸೇರಿ ಇನ್ಮೇಲೆ, ನಿಮ್ಮನ್ನ ರಂಜಿಸಲಿದ್ದಾರೆ.

ಈ ಬಾರಿಯ ವಿಶೇಷತೆ, ಅನುಪಮಾ ಗೌಡ ಈ ಶೋನ ನಿರೂಪಕಿಯಾಗಿದ್ದಾರೆ. ನಿರಂಜನ್ ದೇಶಪಾಂಡೆ ಜ್ಹೀಗೆ ಜಂಪ್ ಆಗಿರೋದರಿಂದ, ಅನುಪಮಾ ಗೌಡ, ಗಿಚ್ಚಿ ಗಿಲಿಗಿಲಿಯ ಸಾರಥ್ಯವಹಿಸಲಿದ್ದಾರೆ. ಬಿಗ್‌ಬಾಸ್ ನಂತರ ಗಿಚ್ಚಿ ಗಿಲಿಗಿಲಿ ನೋಡಿ ಎಂಜಾಯ್‌ ಮಾಡಬಹುದು.

ಇದನ್ನೂ ಓದಿ : ದುಬೈನಲ್ಲಿ ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ಯ ಘರ್ಜನೆ – ಸಿನಿಮಾಗೆ ಬಾಲಿವುಡ್ ರೆಮೋ ಡಿ ಸೋಜಾ ಸಾಥ್!

Btv Kannada
Author: Btv Kannada

Read More