ಆರ್.‌ಶ್ರೀನಿವಾಸ್ ನಿರ್ಮಾಣದ “ಕಾಟನ್ ಪೇಟೆ ಗೇಟ್” ಫೆ.6ಕ್ಕೆ ರಿಲೀಸ್!

ಆರ್. ಎಸ್. ಪ್ರೊಡಕ್ಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ “ಯುವರಾಜ”, “ಕಂಠಿ”, “ಭರ್ಜರಿ”, “ಬಹದ್ದೂರ್” ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಆರ್. ಶ್ರೀನಿವಾಸ್ ಅವರು ನಿರ್ಮಿಸಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ “ಕಾಟನ್ ಪೇಟೆ ಗೇಟ್” ಫೆಬ್ರವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ವೈ. ರಾಜಕುಮಾರ್ ‌ಅವರು ನಿರ್ದೇಶಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರವು ಅದ್ದೂರಿಯಾಗಿ ನಿರ್ಮಾಣವಾಗಿದೆ.

ಯೋಗಿ ರೆಡ್ಡಿ ಅವರ ಛಾಯಾಗ್ರಹಣ, ಎನ್‌. ಎಸ್‌ ಪ್ರಸು ಅವರ ಸಂಗೀತ ಸಂಯೋಜನೆ, ಚೇತನ್ ಕುಮಾರ್ ಅವರ ಸಾಹಿತ್ಯ, ಶಿವ ಸರ್ವಣಿ ಅವರ ಸಂಕಲನವಿರುವ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ವೇಣುಗೋಪಾಲ್, ಯಶ್ವನ್‌, ಸುರಭಿ ತಿವಾರಿ, ಅನುಶಾ ಜೈನ್‌, ಸುಧೀಕ್ಷಾ, ಕಿಸ್ಲೆ ಚೌಧರಿ, ಪಾರ್ಥು, ಸಾಯಿಕುಮಾರ್, ರಘು, ಕಟ್ಟಪ್ಪ ಮುಂತಾದವರು ನಟಿಸಿದ್ದಾರೆ.

Btv Kannada
Author: Btv Kannada

Read More