ಚಿತ್ರಕಲಾ ಪರಿಷತ್ತಿನಲ್ಲಿ ಇಂದು ಆಯೋಜಿಸಲಾಗಿದ್ದ ಮೇರೋತ್ಸವ ಕಾರ್ಯಕ್ರಮದಲ್ಲಿ ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದಂತ ಮೈಸೂರು ಪೇಂಟಿಂಗ್ಸ್ ಮತ್ತು ತಂಜಾವೂರು ಪೈಂಟಿಂಗ್ಸ್ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಶಮಿತಾ ಮಲ್ನಾಡ್, ನಟಿ ಅನು ಪ್ರಭಾಕರ್, ಚಿತ್ರ ಕಲಾವಿದೆ ನೀಲಪಂಚ್, ಚಿತ್ರ ಕಲಾವಿದ ಡಾಕ್ಟರ್ ದುಂಡರಾಜ್ ಅಂಕಣಕಾರರಾದ ಶ್ರೀಕಂಠ ಬಾಳಗಂಚಿ ಮತ್ತು ಮತ್ತು ಚಿತ್ರ ನಿರ್ದೇಶಕರಾದ ಕೆ ರಾಮನಾರಾಯಣ್ ರವರು ಆಗಮಿಸಿದ್ದರು.

ಮೇರು ಚಿತ್ರಕಲಾ ಶಾಲೆಯ ಸಂಸ್ಥಾಪಕರು ಹಾಗೂ ಚಿತ್ರಕಲಾವಿದೆಯಾದ ತಿರುಮಲ ಶ್ರೀಕಾಂತ್ ಅವರು, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು ಹಾಗಾಗಿ ಮೇರು ಚಿತ್ರಕಲೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಚಿತ್ರಗಳನ್ನು ಚಿತ್ರಕಲಾ ಪರಿಷತ್ತಿನ ದೇವರಾಜ್ ಅರಸ್ ಗ್ಯಾಲರಿಯಲ್ಲಿ ಜನವರಿ 9 ,10 ಮತ್ತು 11 ರಂದು ಮೂರು ದಿನಗಳು ಸಾರ್ವಜನಿಕರ ಪ್ರದರ್ಶನಕ್ಕಾಗಿ ಮೇರೋತ್ಸವವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಅನುಪ್ರಭಾಕರ್ ರವರು ಚಿಕ್ಕಂದಿನಲ್ಲಿ ನನ್ನಲ್ಲೂ ಚಿತ್ರ ಕಲಾವಿದೆ ಆಗಬೇಕೆಂಬ ಆಸಕ್ತಿ ಇತ್ತು ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಹಾಗೆಯೇ ಗಾಯಕಿ ಶಮಿತಾ ಮಲ್ನಾಡ್ ರವರು ತಾವು ಬೆಟ್ಟ ಗುಡ್ಡ ಮರಗಳನ್ನು ಬರೆಯುತ್ತಿದ್ದೆವು ಈಗ ಈ ಚಿತ್ರಗಳನ್ನು ನೋಡುವಾಗ ನಮಗೂ ಇಂತಹ ಚಿತ್ರಗಳನ್ನು ಕಲಿತು ಬರೆಯಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.

ನೀಲ ಪಂಚ್ ರವರು ಎಲ್ಲ ವಿದ್ಯಾರ್ಥಿಗಳನ್ನು ಹಾರೈಸಿ ಹೊಗಳಿದರು. ಮತ್ತು ಅಂಕಣಕಾರರಾದ ಶ್ರೀಕಂಠ ಬಳಗುಂಚಿ ರವರು ಗುರು ಪರಂಪರೆಯನ್ನು ಮುಂದುವರೆಸಿ ಎಂದರು. ಡಾಕ್ಟರ್ ಜೆ ದುಂಡರಾಜ್ ರವರು ತನ್ನ ಶಿಷ್ಯೆಯಾದಂತ ತಿರುಮಲ ಶ್ರೀಕಾಂತ್ ಇಂದು ದೊಡ್ಡಮಟ್ಟದ ಮೇರೋತ್ಸವ ಕಾರ್ಯಕ್ರಮ ಮಾಡುತ್ತಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಚಿತ್ರ ನಿರ್ದೇಶಕ ರಾಮನಾರಾಯಣ್ ಅವರು, ತನ್ನ ಒಡಹುಟ್ಟಿದ ತಂಗಿಯಾದ ತಿರುಮಲ ಶ್ರೀಕಾಂತ್ ಸಾಮಾನ್ಯ ಗೃಹಣಿಯಾಗಿದ್ದು, ತನ್ನ ಹವ್ಯಾಸದ ಚಿತ್ರಕಲೆಯನ್ನು ಇಂದು ಇಷ್ಟು ದೊಡ್ಡ ಮಟ್ಟದ ಮೇರೋತ್ಸವವನ್ನಾಗಿಸಲು ಅವಳ ಶಿಸ್ತು ಮತ್ತು ಶ್ರದ್ದೆಯೇ ಈ ಸಾಧನೆಗೆ ಕರಣ ಎಂದು ತಿಳಿಸಿದರು.
ಇದನ್ನೂ ಓದಿ : ಸ್ಯಾಂಡಲ್ವುಡ್ ದಿಗ್ಗಜರ ಮಹಾಸಂಗಮ – ನಿರ್ದೇಶಕ ಎಸ್. ಮಹೇಂದರ್ ಜೊತೆ ಕೈ ಜೋಡಿಸಿದ ನಾದಬ್ರಹ್ಮ ಹಂಸಲೇಖ!







