ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ.. ಹೊಸ ತಲೆಮಾರಿನ ಸಿನಿಮಾಗಳು ಬರ್ತಿವೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪು ಇಂಪನ್ನ ಸೂಸ್ತಿವೆ. ಈ ಬೆಳವಣಿಗೆಗೆ ಅಡಿಪಾಯ ಹಾಕಿದವರು, ಆ ಕಾಲಘಟ್ಟದಲ್ಲಿ ಹಲವು ದಾಖಲೆಗಳನ್ನ ಬರೆದವರು, ಹೊಸ ಅಲೆಯ ಸಿನಿಮಾಗಳಿಗೆ ಮುದ್ರೆ ಹಾಕಿದವರು ಮತ್ತೆ ಬರ್ತಿದ್ದಾರೆ. ಅದೇ ಉತ್ಸಾಹ.. ಅದೇ ಹುಮ್ಮಸ್ಸು.. ಅದೇ ಸಿನಿಮಾ ಶಿಸ್ತಿನಲ್ಲಿ.. ಈ ತಲೆಮಾರಿಗೊಂದು ನವ್ಯ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಅವರೇ ನಿರ್ದೇಶಕ ಎಸ್ ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ.

ಸುಮಾರು 20 ಸಿನಿಮಾಗಳಿಗೆ ಜೊತೆಯಾಗಿ ಕೆಲಸ ಮಾಡಿ, ಸತತ ಗೆಲುವುಗಳನ್ನ ಸಂಭ್ರಮಿಸಿದ್ದ ನಾದಬ್ರಹ್ಮ ಹಂಸಲೇಖ ಅವರು ಮತ್ತೊಂದು ಹೊಸ ದೃಶ್ಯಕಾವ್ಯಕ್ಕೆ ಕೈ ಜೋಡಿಸಿದ್ದಾರೆ. ಈ ಸೂಪರ್ ಹಿಟ್ ಕಾಂಬಿನೇಷನ್ ಸಿನಿಮಾಗೆ, ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿದ್ದಂತಹ, ಹಲವು ಸಿನಿಮಾಗಳಿಗೆ ಆರ್ಥಿಕವಾಗಿ ಬೆಂಬಲವಾಗಿ ಬೆನ್ನೆಲುಬಾಗಿ ನಿಂತಿದ್ದ ಕೆ.ಸಿ ವಿಜಯ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಶ್ರೀಗುರುರಾಯರು ಸಿನಿಮಾ ಬ್ಯಾನರ್ ನಡಿಯಲ್ಲಿ ಚಿತ್ರ ಸೆಟ್ಟೇರಲಿದ್ದು, ಇದೇ ತಿಂಗಳ 16ನೇ ತಾರೀಖು ಚಿತ್ರದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಪರಿಚಯ ಮಾಡಿಕೊಡಲಿದ್ದಾರೆ.
ಇದನ್ನೂ ಓದಿ : “ರಾಮ್ ರಹೀಮ್” ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ ನಮ್ ಋಷಿ!







