ಚಿಟ್ ಫಂಡ್‌ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ – ಆರೋಪಿಗೆ ಸಾರ್ವಜನಿಕವಾಗಿ ಮೆರವಣಿಗೆ!

ಹಾವೇರಿ : ಚಿಟ್ ಫಂಡ್‌ ಹೆಸರಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ. ಸಾಲೇಶ್ವರ ಪಟ್ಟ ಜ್ಯೋತಿ ಕ್ರೆಡಿಟ್ ಸಹಕಾರಿ ಹೆಸರಲ್ಲಿ ಈಶ್ವರ ಚಿನ್ನಿಕಟ್ಟಿ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿರುವ ಆರೋಪ ಕೇಳಿಬಂದಿದೆ.

ವಂಚಕ ಈಶ್ವರ ಚಿನ್ನಿಕಟ್ಟಿ ಕೋರ್ಟ್​ಗೆ ಹಾಜರಾಗಲು ಹೋಗ್ತಿದ್ದ ವೇಳೆ ಸಂತ್ರಸ್ತರು ಅಡ್ಡಗಟ್ಟಿದ್ದು, ಈ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಚಿಟ್ ಫಂಡ್ ಕಂಪನಿ ಮಾಲೀಕನಿಗೆ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ.

ಐನಾತಿ ಈಶ್ವರ ಚಿನ್ನಿಕಟ್ಟಿ ವಂಚಿಸಿ ಚಿಟ್ ಫಂಡ್ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದ. ದರುಳ ಪೊಲೀಸರ ಮೂಲಕ ಕೋರ್ಟ್​ಗೆ ಹಾಜರಾಗಲು ಯತ್ನಿಸಿದ್ದ. ಮಾಹಿತಿ ತಿಳಿದು ಸಂತ್ರಸ್ತರು ಕೋರ್ಟ್ ಆವರಣಕ್ಕೆ ನುಗ್ಗಿ ಅಡ್ಡಗಟ್ಟಿದ್ದು, ಪೊಲೀಸ್ ಜೀಪ್​ನಿಂದ ಕೆಳಗಿಳಿಸಿ ನಡುರಸ್ತೆಯಲ್ಲೇ ವಂಚಕನನ್ನು ಮೆರವಣಿಗೆ ಮಾಡಲಾಗಿತ್ತು. ಈಶ್ವರ ಚಿನ್ನಿಕಟ್ಟಿ ವಿರುದ್ಧ ಚಿಟ್ ಫಂಡ್ಸ್ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ರಾಣೇಬೆನ್ನೂರು ಶಹರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ : ಕೋಟ್ಯಾಂತರ ಮೌಲ್ಯದ ರೈಲ್ವೆ ಜಾಗ ಒತ್ತುವರಿ – ಮನೆ, ಮಳಿಗೆಗಳಿಗೆ ತೆರವು ನೋಟಿಸ್ ಜಾರಿ!

Btv Kannada
Author: Btv Kannada

Read More