ತುಮಕೂರು : ಐತಿಹಾಸಿಕ ಕ್ಷೇತ್ರ ದೇವರಾಯನದುರ್ಗದಲ್ಲಿ ದುಷ್ಕರ್ಮಿಗಳು ಮಂಗಗಳಿಗೆ ವಿಷವಿಟ್ಟ ಘಟನೆ ನಡೆದಿದೆ. ಕಿಡಿಗೇಡಿಗಳು ಅನ್ನದಲ್ಲಿ ವಿಷ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಷ ಸೇವಿಸಿ ಮಂಗಗಳು ಹಾಗೂ ಲಂಗೂರ್ಗಳು ಸಾವನ್ನಪ್ಪಿದ್ದು, 11 ಮಂಗ 2 ಲಂಗೂರ್ ಮೃತದೇಹ ಪತ್ತೆಯಾಗಿದೆ.

ದುಷ್ಕರ್ಮಿಗಳು ದೇವರಾಯನದುರ್ಗ ಸುತ್ತ ಒತ್ತುವರಿ ಮಾಡುತ್ತಿದ್ದು, ಒತ್ತುವರಿ ಮಾಡಿರೋ ಜಾಗದಲ್ಲಿ ಹೆಚ್ಚಾಗಿರುವ ಕಾಡು ಪ್ರಾಣಿಗಳ ಉಪಟಳವಿದೆ. ಹಾಗಾಗಿ ಮಂಗಗಳಿಗೆ ವಿಷಪ್ರಾಶನ ಮಾಡಿರುವ ಶಂಕೆ ಇದೆ. ಸ್ಥಳಕ್ಕೆ ಆಗಮಿಸಿರೋ ಉರ್ಡುಗೆರೆ ಪಶು ವೈದ್ಯಾಧಿಕಾರಿಯಿಂದ ಶವಪರೀಕ್ಷೆ ಮಾಡಿದ್ದು, ಪರೀಕ್ಷಾ ವರದಿಯಲ್ಲಿ ಅನ್ನದ ಅಂಶ ಪತ್ತೆಯಾಗಿದೆ. ಅಧಿಕಾರಿಗಳು FSIL ಪರಿಶೀಲನೆಗೆ ಕಳುಹಿಸಿದ್ದಾರೆ.

ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ತುರ್ತು ಸಭೆ ಕರೆದು ದುಷ್ಕರ್ಮಿಗಳ ಪತ್ತೆಗೆ ಸೂಚನೆ ನೀಡಿದ್ದಾರೆ. ಇಂದು FSIL ವರದಿ ಬರುವ ನೀರೀಕ್ಷೆಯಿದೆ. ವರದಿ ಬಂದ ಬಳಿಕ ತುಮಕೂರು ತಾಲೂಕು ಅರಣ್ಯಾಧಿಕಾರಿಗಳಿಂದ ತನಿಖೆ ಚುರುಕುಗೊಳ್ಳಲಿದೆ. ಈ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.







