ಮೇಖ್ರಿ ಸರ್ಕಲ್ ಟ್ರಾಫಿಕ್‌ಗೆ ಸಿಗಲಿದೆ ಮುಕ್ತಿ – 403 ಕೋಟಿಯ ಹೊಸ ಫ್ಲೈಓವರ್‌ಗೆ BDA ಟೆಂಡರ್!

ಬೆಂಗಳೂರು : ಬೆಂಗಳೂರಿನ ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ನಲ್ಲಿ ದಶಕಗಳಿಂದ ಇರುವ ಟ್ರಾಫಿಕ್ ದಟ್ಟಣೆಗೆ ಮುಕ್ತಿ ನೀಡಲು ಬಿಡಿಎ (BDA) ಮುಂದಾಗಿದೆ. ಇಲ್ಲಿ 403 ಕೋಟಿ ರೂಪಾಯಿ ವೆಚ್ಚದ 2.4 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಧಿಕೃತವಾಗಿ ಟೆಂಡರ್ ಆಹ್ವಾನಿಸಲಾಗಿದೆ.

ಈ ಹೊಸ ಫ್ಲೈಓವರ್ ಬ್ಯಾಪ್ಟಿಸ್ಟ್ ಆಸ್ಪತ್ರೆ ಸಮೀಪದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ (UAS) ವಸತಿಗೃಹದಿಂದ ಮೇಖ್ರಿ ಸರ್ಕಲ್‌ವರೆಗೆ 2.4 ಕಿ.ಮೀ ಉದ್ದದ ದ್ವಿಪಥ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಈ ದ್ವಿಮುಖ ಸಂಚಾರದ ಫ್ಲೈಓವರ್‌ನಲ್ಲಿ ವಾಹನಗಳ ಸುಗಮ ಓಡಾಟಕ್ಕಾಗಿ ಮೇಖ್ರಿ ಸರ್ಕಲ್ ಬಳಿ ರೋಟರಿ ರಾಂಪ್ ವ್ಯವಸ್ಥೆ ಇರಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೆಬ್ಬಾಳ ಫ್ಲೈಓವರ್ ದಾಟಿದ ನಂತರ ಮೇಖ್ರಿ ಸರ್ಕಲ್ ಬಳಿ ವಾಹನಗಳು ಬಾಟಲ್‌ನೆಕ್‌ನಂತೆ (Bottleneck) ಸಿಲುಕಿಕೊಳ್ಳುತ್ತಿದ್ದವು. ಈ ಹೊಸ ಫ್ಲೈಓವರ್ ತಪ್ಪಿಸಲಿದೆ. ಇದರಿಂದ ಏರ್‌ಪೋರ್ಟ್ ಕಡೆಯಿಂದ ಬರುವ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ನಗರವನ್ನು ಪ್ರವೇಶಿಸಬಹುದು.

ಬಿಡಿಎ ಈ ಯೋಜನೆಯನ್ನು 403.25 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ‘ಇಪಿಸಿ’ (EPC) ಮಾದರಿಯಲ್ಲಿ ಕೈಗೆತ್ತಿಕೊಳ್ಳುತ್ತಿದೆ. ಈಗಾಗಲೇ ಹೆಬ್ಬಾಳ ಫ್ಲೈಓವರ್‌ಗೆ ಹೊಸ ಲೂಪ್‌ಗಳನ್ನು ಸೇರಿಸಲಾಗಿದ್ದು, ಈ ಹೊಸ 2.4 ಕಿ.ಮೀ ಫ್ಲೈಓವರ್ ಪೂರ್ಣಗೊಂಡರೆ ಉತ್ತರ ಬೆಂಗಳೂರಿನ ಸಂಚಾರ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ.

ಇದನ್ನೂ ಓದಿ : ಮಾಜಿ ಸಚಿವ ನಾಗೇಂದ್ರ ಆಪ್ತನಿಗೆ CBI ಬಿಗ್ ಶಾಕ್​ – ವಿಶ್ವನಾಥ್ ಮನೆ ಮೇಲೆ ರೇಡ್!

Btv Kannada
Author: Btv Kannada

Read More