ಬೆಂಗಳೂರು : ನ್ಯೂ ಇಯರ್ ಸೆಲೆಬ್ರೇಷನ್ನಲ್ಲಿ ಕುಡಿದು ಟೈಟಾದ್ರೆ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಕುಡಿದು ನಡಿಯೋಕೆ ಆಗಲ್ಲ, ಪ್ರಜ್ಞೆ ಇರಲ್ವೋ ಅಂತವರಿಗೆ ಬಿಡ್ತೀವಿ. ನಾವು 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ,
ಅಲ್ಲಿಗೆ ಫಸ್ಟ್ ಕರ್ಕೊಂಡು ಹೋಗಿ, ಕೆಲ ಹೊತ್ತು ಇಟ್ಕೊತಾರೆ. ಬಳಿಕ ಅವರ ಅಡ್ರೆಸ್ ತಗೊಂಡು ಮನೆಗೆ ಕಳಿಸೋ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ.
ವಿಶೇಷವಾಗಿ ಹೆಣ್ಣು ಮಕ್ಕಳನ್ನು ಅವರ ಮನೆಗೆ ಕಳಿಸುತ್ತೇವೆ. ಆ ಸಂದರ್ಭದಲ್ಲಿ ಯಾವ, ಯಾವ ಪರಿಸ್ಥಿತಿಲಿ ಇರ್ತಾರೆ ಹೇಳಕ್ ಬರಲ್ಲ, ಅವರಿಗೆ ಯಾರು ಏನ್ ಬೇಕಾದ್ರು ಮಾಡಬಹುದಲ್ಲ, ಆ ಸೇಫ್ಟಿಗೆ ಇದು ಮಾಡಿದ್ದೇವೆ. 12 ಗಂಟೆ ಮೇಲೆ ಸ್ವಲ್ಪ ಹೆಚ್ಚು ಜನ ಸೇರ್ತಾರೆ ಎಲ್ಲವೂ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು : ‘ರಕ್ಕಸಪುರದೋಳ್’ನಲ್ಲಿ ರಾಜ್ ಬಿ ಶೆಟ್ಟಿ ದರ್ಶನ – ಚಿತ್ರದಲ್ಲಿ ಶೆಟ್ರು ರಕ್ಷಕನೋ.. ರಾಕ್ಷಸನೋ?







