ಮತ್ತಷ್ಟು ಮನರಂಜನೆಯೊಂದಿಗೆ ಬರಲಿದೆ ’45’ – ಮಲ್ಟಿಸ್ಟಾರರ್ ಚಿತ್ರಕ್ಕೆ ಹೊಸ ಕಿಕ್.. ನಾಳೆಯಿಂದ ಥಿಯೇಟರ್‌ಗಳಲ್ಲಿ ‘Afro Tapang’ ಧಮಾಕಾ!

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟನೆಯ ’45’ ಸಿನಿಮಾ ಕ್ರಿಸ್ಮಸ್​ಗೆ ಭರ್ಜರಿಯಾಗಿ ರಿಲೀಸ್ ಆಗಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಮತ್ತಷ್ಟು ಮನರಂಜನೆಯೊಂದಿಗೆ ಬರಲಿದೆ. ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿರುವ ’45’ ಚಿತ್ರಕ್ಕೆ ಈಗ ಹೊಸ ಸೇರ್ಪಡೆಯಾಗಲಿದೆ.

ಫ್ಯಾಮಿಲಿ ಆಡಿಯನ್ಸ್​ಯಿಂದ ಭಾರೀ ಮೆಚ್ಚುಗೆ ಪಡೆದಿರುವ ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರದ ಪ್ರಮೋಶನ್​ಗಾಗಿ ಆಫ್ರೋ ಸಾಂಗ್ ರಿಲೀಸ್ ಮಾಡಲಾಗಿತ್ತು. ಈ ಸಾಂಗ್​ಗೆ ಫ್ಯಾನ್ಸ್​​ ಫಿದಾ ಆಗಿದ್ದು, ಇದೀಗ ಅಭಿಮಾನಿಗಳ ಒತ್ತಾಯದ ಮೇರೆಗೆ 45 ಚಿತ್ರಕ್ಕೆ ಆಫ್ರೋ ಟಪಾಂಗ್ ಸಾಂಗ್ ಸೇರ್ಪಡೆಯಾಗಲಿದೆ. ನಾಳೆಯಿಂದ 45 ಸಿನಿಮಾದಲ್ಲಿ ಆಫ್ರೋ ಟಪಾಂಗ್ ಸಾಂಗ್ ಕಾಣಿಸಲಿದೆ. ಹೊಸ ವರ್ಷಕ್ಕೆ ಹೊಸ ಅವತಾರದಲ್ಲಿ ಥಿಯೇಟರ್​ನಲ್ಲಿ ಆಫ್ರೋ ಟಪಾಂಗ್ ಸಾಂಗ್ ದರ್ಶನವಾಗಲಿದೆ.

ಆಫ್ರೋ ಟಪಾಂಗ್​ನಲ್ಲಿ ಉಂಗಾಡದ ಘೆಟ್ಟೋ ಕಿಡ್ಸ್ ಜೊತೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸೇರಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣ, ಉಪ್ಪಿ ಹಾಗೂ ಶೆಟ್ರ ಸಿಗ್ನೇಚರ್ ಸ್ಟೆಪ್‌ಗಳನ್ನು ಮಿಕ್ಸ್ ಮಾಡಿ ಹೊಸ ರೀತಿಯಲ್ಲಿ ಡ್ಯಾನ್ಸ್ ಕಂಪೋಸ್ ಮಾಡಲಾಗಿದೆ. ಮಕ್ಕಳ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ಮೂವರು ಸಖತ್ ಸ್ಟಪ್ ಹಾಕಿದ್ದು, ಸಿನಿರಸಿಕರಂತೂ ಈ ಹಾಡಿಗೆ ಫುಲ್ ಫಿದಾ ಆಗಿದ್ದಾರೆ.

ಮಲ್ಟಿಸ್ಟಾರರ್ ”45” ಸಿನಿಮಾ ಐದು ದಿನದಲ್ಲಿ 12.30 ಕೋಟಿ ರೂ ಕಲೆಕ್ಷನ್ ಮಾಡಿದೆ. ಸದ್ಯ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿರುವ ಈ ಚಿತ್ರ ನಾಳೆಯಿಂದ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಕೂಡ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಕೂಡ ಕರ್ನಾಟಕದಲ್ಲಿ ಚಿತ್ರ ಉತ್ತಮವಾದ ಗಳಿಕೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ : ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ – ನಾಲ್ವರಿಗೆ ಗಂಭೀರ ಗಾಯ!

Btv Kannada
Author: Btv Kannada

Read More