ಬೆಂಗಳೂರು : ಸಿಲಿಕಾನ್ ಸಿಟಿ ಸೇರಿ ದೇಶಾದ್ಯಂತ ನ್ಯೂ ಇಯರ್ ಸೆಲೆಬ್ರೆಷನ್ಗೆ ಸಕಲ ಸಿದ್ದತೆ ನಡೆದಿದೆ. ಬೆಂಗಳೂರಿನಲ್ಲಿ ಹೊಸವರ್ಷಾಚರಣೆ ನಡೆಯುವ ಏರಿಯಾಗಳಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಪೊಲೀಸ್ & ತುರ್ತು ವಾಹನ ಹೊರತುಪಡಿಸಿ ಉಳಿದ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಬೆಂಗಳೂರಿನ ಎಂ.ಜಿ.ರಸ್ತೆ – ಮೇಯೋ ಹಾಲ್ ಜಂಕ್ಷನ್, ಬ್ರಿಗೇಡ್ ರಸ್ತೆ- ಕಾವೇರಿ ಎಂಪೋರಿಯಂನಿಂದ ಒಪೇರಾ ಜಂಕ್ಷನ್, ಚರ್ಚ್ ಸ್ಟ್ರೀಟ್ – ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ. ರೆಸಿಡೆನ್ಸಿ ರಸ್ತೆ – ಆಶೀರ್ವಾದಮ್ ಜಂಕ್ಷನ್ನಿಂದ ಮೇಯೋ ಹಾಲ್ ಜಂಕ್ಷನ್, ಮ್ಯೂಸಿಯಂ ರಸ್ತೆ, ಹಳೇ ಮದ್ರಾಸ್ ಬ್ಯಾಂಕ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಮ್ಯೂಸಿಯಂ ರಸ್ತೆಯಲ್ಲಿ ವಾಹನ ಸಂಚಾರ ಚೇಂಜ್ ಮಾಡಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಗಿನ ಜಾವ 3 ಗಂಟೆಯವರೆಗೂ ವಾಹನಗಳಿಗೆ ನಿಷೇಧ ಹೇರಲಾಗಿದೆ.
ನ್ಯೂ ಇಯರ್ ಸೆಲೆಬ್ರೆಷನ್ಗೆ ವಾಹನ ಸಂಚಾರ ಬದಲು : ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಖಾಸಗಿ ವಾಹನಗಳಿಗೆ ನಿಷೇಧಿಸಲಾಗಿದೆ. ನಿಷೇಧಿತ ರಸ್ತೆಗಳಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ-ಡಿಕನ್ಸನ್ ರಸ್ತೆ, ಕಬ್ಬನ್ ರಸ್ತೆ ಮೂಲಕ ಸಂಚರಿಸಲಿದೆ. ದೊಮ್ಮಲೂರು ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್, ಎಎಸ್ಸಿ ಸೆಂಟರ್, ಟ್ರಿನಿಟಿ ಮೂಲಕ ಸಂಚಾರ ಮಾಡುತ್ತೆ.
ಇನ್ನು ಹೆಚ್ಎಎಲ್ ಕಡೆಯಿಂದ ಬರುವ ವಾಹನಗಳು ಎಎಸ್ಸಿ ಸೆಂಟರ್, ಟ್ರಿನಿಟಿ ಮೂಲಕ ಸಂಚರಿಸಲಿದೆ. ಬ್ರಿಗೇಡ್ ರಸ್ತೆಯಲ್ಲಿ ಪಾದಚಾರಿಗಳಿಗೂ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಲಾಗಿದ್ದು, ಎಂ.ಜಿ ರಸ್ತೆ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ಕಡೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಇದೇ ರಸ್ತೆಯಲ್ಲಿ ಪಾದಚಾರಿಗಳನ್ನು ವಿರುದ್ಧ ದಿಕ್ಕಿನ ಓಡಾಟಕ್ಕೆ ನಿಷೇಧಿಸಲಾಗಿದೆ.
ನ್ಯೂ ಇಯರ್ಗೆ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ :
ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣ 1ನೇ ಮಹಡಿ, ಯುಬಿ ಸಿಟಿ, ಗರುಡಾ ಮಾಲ್ ಹಾಗೂ ಕಾಮರಾಜ ರಸ್ತೆ, ಕ್ಯಾಬ್ ಪಿಕಫ್ ಮತ್ತು ಡ್ರಾಪ್ ಪಾಯಿಂಟ್ಸ್, ಕಬ್ಬನ್ ರಸ್ತೆ – ಬಿಆರ್ವಿ ಜಂಕ್ಷನ್ ಚಿನ್ನಸ್ವಾಮಿ ಕ್ರೀಡಾಂಗಣ ಗೇಟ್ -6. ಕ್ವೀನ್ಸ್ ರಸ್ತೆ – ಸಿಟಿಓ ಜಂಕ್ಷನ್, ರಾಜಭವನ ರಸ್ತೆ- ಸಿಟಿಓ ಜಂಕ್ಷನ್ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಲ್ಲಿ ನ್ಯೂ ಇಯರ್ ಮುಗಿಸಿ ತೆರಳಲು ಬಸ್ ವ್ಯವಸ್ಥೆ :
- ಆಶೀರ್ವಾದಮ್ ಸರ್ಕಲ್ ನಿಂದ ಬನ್ನೇರುಘಟ್ಟ ಕಡೆಗೆ
- ಅನಿಲ್ ಕುಂಬ್ಳೆ ಜಂಕ್ಷನ್ನಿಂದ ಬನಶಂಕರಿ ಕಡೆಗೆ
- ಅನಿಲ್ ಕುಂಬ್ಳೆ ಸರ್ಕಲ್ನಿಂದ ನೈಸ್ ರಸ್ತೆ ಜಂಕ್ಷನ್ ಕಡೆಗೆ
- ಅನಿಲ್ ಕುಂಬ್ಳೆ ವೃತ್ತದಿಂದ ಮೋದಿ ಆಸ್ಪತ್ರೆ & ಸುಂಕದಕಟ್ಟೆಗೆ
- ಡೆಕಾಥ್ಲಾನ್ ಒಪೇರಾ ಜಂಕ್ಷನ್ನಿಂದ ನೈಸ್ ರಸ್ತೆ ಜಂಕ್ಷನ್
- ಹ್ಯಾಸ್ಮಾಟ್ ಆಸ್ಪತ್ರೆಯಿಂದ ಮಾರತ್ತಹಳ್ಳಿ ಕಡೆಗೆ
- ಮೇಯೋ ಹಾಲ್ನಿಂದ ಚಿಕ್ಕಜಾಲ, ಮಾದಾವರ ಕಡೆಗೆ
- ಟ್ರಿನಿಟಿ ಸರ್ಕಲ್ ನಿಂದ ಬಾಗಲೂರು, ಹೊಸಕೋಟೆ ಕಡೆಗೆ
ಇದನ್ನೂ ಓದಿ : ಬೆಂಗಳೂರಿಗರಿಗೆ BMRCLಯಿಂದ ಗುಡ್ ನ್ಯೂಸ್ – ಹೊಸ ವರ್ಷಕ್ಕೆ ಮುಂಜಾನೆ 3 ಗಂಟೆವರೆಗೂ ಮೆಟ್ರೋ ಸಂಚಾರ ವಿಸ್ತರಣೆ!







