ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ)ಗೆ ಕೋಟಿ ಕೋಟಿ ರೂಪಾಯಿ ವಂಚಿಸಿ ಭಾರತ ಬಿಟ್ಟು ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ಜಾರಿ ನಿರ್ದೇಶನಾಲಯದ ಸೇರಿ ಭಾರತದ ತನಿಖೆ ಸಂಸ್ಥೆಗಳ ಕೋರಿಕೆ ಮೇರೆಗೆ ಮೆಹುಲ್ ಚೋಕ್ಸಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೆಹುಲ್ ಚೋಕ್ಸಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ಆರೋಪ ಇದೆ. ಆದರೆ ವೈದ್ಯಕೀಯ ಚಿಕಿತ್ಸೆಗೆಂದು ಯೋರೋಪ್ಗೆ ಹೋಗಿದ್ದವರು ಮತ್ತೆ ಭಾರತದತ್ತ ಮುಖ ಕೂಡ ಮಾಡಿರಲಿಲ್ಲ. ಇವರ ಮೇಲೆ ಮುಂಬೈ ಕೋರ್ಟ್ ಜಾಮೀನು ರಹಿತ ವಾಂರಟ್ ಕೂಡ ಹೊರಡಿಸಿದೆ. ಬ್ಯಾಂಕ್ ವಂಚನೆಯಲ್ಲಿ ಚೋಕ್ಸಿ ಜೊತೆಗೆ ಅವರ ಸೋದರಳಿಯ ಕೂಡ ಭಾಗಿಯಾಗಿರುವ ಆರೋಪಗಳಿವೆ.
ಮೆಹುಲ್ ಚೋಕ್ಸಿ ಭಾರತದಿಂದ ಬಂದು ಇಲ್ಲಿ ತಲೆಮರೆಸಿಕೊಂಡಿರುವುದನ್ನು ಬೆಲ್ಜಿಯಂ ಅಧಿಕಾರಿಗಳು ಕಳೆದ ತಿಂಗಳು ಕನ್ಫರ್ಮ್ ಮಾಡಿದ್ದರು. ಪತ್ನಿ ಪ್ರೀತಿ ಚೋಕ್ಸಿ ಜೊತೆ ರೆಸಿಡೆನ್ಸಿ ಕಾರ್ಡ್ ಪಡೆದುಕೊಂಡು ಆಂಟೆರ್ಪ್ ನಗರದಲ್ಲಿ ವಾಸಿಸುತ್ತಿರುವುದು ಗೊತ್ತಾಗಿತ್ತು. ಚೋಕ್ಸಿ ಮೇಲಿನ ಪ್ರಕರಣವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸಿ ಇದೀಗ ಬಂಧಿಸಿದೆ ಎಂದು ಬೆಲ್ಜಿಯಂನ ಫೆಡರಲ್ ಪಬ್ಲಿಕ್ ಸರ್ವೀಸ್ನ ವಿದೇಶಾಂಗ ವ್ಯವಹಾರಗಳ ಸಿಬ್ಬಂದಿ ಡೇವಿಡ್ ಜೋರ್ಡೆನ್ಸ್ ಅವರು ತಿಳಿಸಿದ್ದಾರೆ. ಇನ್ನು ಬಂಧನ ಪ್ರಕ್ರಿಯೆಗಳ ಬಳಿಕ ಸದ್ಯದಲ್ಲೇ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಇನ್ನಿತರ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 4ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್!
