ಬೆಂಗಳೂರಿಗರಿಗೆ BMRCLಯಿಂದ ಗುಡ್​ ನ್ಯೂಸ್ – ಹೊಸ ವರ್ಷಕ್ಕೆ ಮುಂಜಾನೆ 3 ಗಂಟೆವರೆಗೂ ಮೆಟ್ರೋ ಸಂಚಾರ ವಿಸ್ತರಣೆ!

ಬೆಂಗಳೂರು : ಹೊಸ ವರ್ಷಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, 2026ರ ಹೊಸವರ್ಷದ ವೆಲ್‌ಕಮ್‌ಗೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಇದೀಗ ನ್ಯೂ ಇಯರ್ ಸೆಲೆಬ್ರೇಷನ್​ ಸಂಭ್ರಮದಲ್ಲಿರುವ ಬೆಂಗಳೂರು ಜನರಿಗೆ BMRCL ಗುಡ್​ ನ್ಯೂಸ್ ನೀಡಿದೆ. ಹೊಸ ವರ್ಷಾಚರಣೆಗೆ ತಡರಾತ್ರಿ ವರೆಗೂ ನಮ್ಮ ಮೆಟ್ರೋ ಸಂಚಾರ ಇರುತ್ತೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ಮೆಟ್ರೂ ರೈಲು ಸೇವೆಗಳನ್ನು ರಾತ್ರಿ 3 ಗಂಟೆ ವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಕುರಿತು BMRCL ಮಾಹಿತಿ ಹಂಚಿಕೊಂಡಿದ್ದು, ಯಾವ ಮಾರ್ಗಗಳಲ್ಲಿ ಎಷ್ಟು ಗಂಟೆಗೆ ಕೊನೆಯ ಮೆಟ್ರೋ ಸಂಚಾರ ಮಾಡಲಿದೆ ಎಂಬ ಮಾಹಿತಿ ನೀಡಿದೆ. ಯಾವ ನಿಲ್ದಾಣದಿಂದ ಕೊನೆಯ ರೈಲು ಎಷ್ಟು ಗಂಟೆಗೆ ಹೊರಡಲಿದೆ ಎಂದು ತಿಳಿಸಿದೆ.

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು BMRCL ಮಾಹಿತಿ ನೀಡಿದೆ. ಇನ್ನು ಕೊನೆಯ ರೈಲುಗಳು 2026ರ ಜನವರಿ 1ರಂದು ಮುಂಜಾನೆ ಹೊರಡಲಿದೆ.

ಕೊನೆಯ ಮೆಟ್ರೋ ರೈಲುಗಳ ಸಮಯ :

  • ನೇರಳೆ ಮಾರ್ಗ : ವೈಟ್​ಫೀಲ್ಡ್​ನಿಂದ ಚಲ್ಲಘಟ್ಟದ ವರೆಗೆ – ಬೆಳಗಿನ ಜಾವ 1:45ಗಂಟೆಗೆ, ಚಲ್ಲಘಟ್ಟದಿಂದ ವೈಟ್​ಫೀಲ್ಡ್​ ವರೆಗೆ – ಬೆಳಗಿನ ಜಾವ 2 ಗಂಟೆಗೆ
  • ಹಸಿರು ಮಾರ್ಗ : ಮಾದಾವರದಿಂದ ರೇಷ್ಮೆ ಸಂಸ್ಥೆಯ ವರೆಗೆ – ಬೆಳಗಿನಜಾವ 2 ಗಂಟೆಗೆ, ರೇಷ್ಮೆ ಸಂಸ್ಥೆಯಿಂದ ಮಾದಾವರದ ವರೆಗೆ – ಬೆಳಗಿನಜಾವ 2:00ಗಂಟೆಗೆ
  • ಹಳದಿ ಮಾರ್ಗ : RV ರಸ್ತೆಯಿಂದ ಬೊಮ್ಮಸಂದ್ರದವರೆಗೆ – ಬೆಳಗಿನಜಾವ 3:10 ಗಂಟೆಗೆ, ಬೊಮ್ಮಸಂದ್ರ ದಿಂದ RV ರಸ್ತೆಯ ವರೆಗೆ – ಬೆಳಗಿನಜಾವ 1:30 ಗಂಟೆಗೆ

ಇದನ್ನೂ ಓದಿ : ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ!

Btv Kannada
Author: Btv Kannada

Read More