ಬೆಂಗಳೂರು : ಹೈಪರ್ ಸ್ಫೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಮಾಧ್ಯಮ ಕ್ರಿಕೆಟ್ ಲೀಗ್ ಲೋಗೋ ಮತ್ತು ಟ್ರೋಫಿ ಅನಾವರಣ ಮಾಡಲಾಯ್ತು. ಡಿಸೆಂಬರ್ 26 ರಂದು ಖಾಸಗಿ ಹೋಟೆಲ್ನಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕರ್ನಾಟಕ ಮಾಧ್ಯಮ ಲೋಕದಲ್ಲಿ ಮಾಧ್ಯಮ ಮಿತ್ರರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 15 ನಂತರ ಬೆಂಗಳೂರಿನ ಆಚಾರ್ಯ ಕಾಲೇಜು ಮೈದಾನದಲ್ಲಿ ಹೊನಲು – ಬೆಳಕಿನ ಪಂದ್ಯಗಳು ನಡೆಯಲಿವೆ.

ಇದೇ ವೇಳೆ ಲೋಗೋ ಮತ್ತು ಟ್ರೋಫಿ ಅನಾವರಣ ಮಾಡಲಾಯ್ತು. ಮಹಿಳಾ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅನುಕೂಲವಾಗಲು ಹಾಗೂ ಕ್ಯಾನ್ಸರ್ ಜಾಗೃತಿಗಾಗಿ ಈ ಟೂರ್ನಮೆಂಟ್ ಆಯೋಜಿಸಲಾಗಿದೆ.
ಇದನ್ನೂ ಓದಿ : ಕಂಟೇನರ್ ಲಾರಿ ಪಲ್ಟಿ – ಬಾಲಕ ಸಾವು, ಇಬ್ಬರ ಸ್ಥಿತಿ ಗಂಭೀರ!
Author: Btv Kannada
Post Views: 226







