ಪವಿತ್ರಾ ಗೌಡಗೆ ಮನೆ ಊಟ – ಕೋರ್ಟ್ ಆದೇಶ!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್​ಗೆ ಮನೆ ಊಟ ನೀಡಲು ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆರೋಪಿಗಳ ಮನವಿ ಮೇರೆಗೆ ಮನೆ ಊಟ ನೀಡಲು ಕೋರ್ಟ್ ಆದೇಶ ನೀಡಿದೆ.

ನಿನ್ನೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪ್ರಕರಣದ ಟ್ರಯಲ್ ವಿಚಾರಣೆ ನಡೆಯಿತು. ಈ ವೇಳೆ ಎ-1 ಆರೋಪಿ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರು ನ್ಯಾಯಾಧೀಶರ ಮುಂದೆ ಜೈಲು ಅಧಿಕಾರಿಗಳು ಸರಿಯಾದ ಊಟ ನೀಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಹಾಗಾಗಿ ಜೈಲು ಅಧಿಕಾರಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡುವಂತೆ ಕೋರ್ಟ್ ಸೂಚನೆ ಕೊಟ್ಟಿದೆ.

ಇನ್ನು ಕೋರ್ಟ್​ನಲ್ಲಿ ಟ್ರಯಲ್ ಆರಂಭವಾಗಿದ್ರೂ ಕೂಡ ಪ್ರಕರಣ ಸಂಬಂಧ ಆರೋಪಿಗಳ ಜೊತೆ ಚರ್ಚೆಗೆ ಜೈಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ ಎಂದು ವಕೀಲರು ಆರೋಪ ಮಾಡಿದ್ರು. ಆರೋಪಿಗಳ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಇದೀಗ ವಕೀಲರ ಭೇಟಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ : ಕುತೂಹಲ ಕೆರಳಿಸಿದ ಪ್ರಭಾಸ್‌‌ ನಟನೆಯ ‘ದಿ ರಾಜಾಸಾಬ್’ ಸಿನಿಮಾ ಟ್ರೈಲರ್ – ಜ.9ಕ್ಕೆ ವಿಶ್ವದಾದ್ಯಂತ ಚಿತ್ರ ತೆರೆಗೆ!

Btv Kannada
Author: Btv Kannada

Read More