ಬಾಕ್ಸ್‌ ಆಫೀಸ್‌ನಲ್ಲಿ ’45’ ಅಬ್ಬರ – ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಸಿನಿಮಾ!

ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್, ಉಪೇಂದ್ರ, ರಾಜ್​ಬಿ. ಶೆಟ್ಟಿ ನಟಿಸಿರುವ ’45’ ಸಿನಿಮಾ ಕ್ರಿಸ್ಮಸ್​ಗೆ ಅದ್ಧೂರಿಯಾಗಿ ತೆರೆ ಕಂಡಿತ್ತು. ಇಂದಿಗೆ ಇದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮೂಲಕ ಯಶಸ್ಸಿನ ಹಾದಿ ಹಿಡಿದಿದೆ. ಅರ್ಜುನ್ ಜನ್ಯ ನಿರ್ದೇಶನದ ಈ ಸಿನಿಮಾ ಕಲೆಕ್ಷನ್‌ನಲ್ಲೂ ಧೂಳೆಬ್ಬಿಸುತ್ತಿದೆ.

ಮೂವರು ಘಟಾನುಘಟಿ ಕಲಾವಿದರ ಸಂಗಮದ ಈ ಸಿನಿಮಾ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆಯುತ್ತಿದ್ದು, ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ದಿನದಿಂದಲೇ ಸಖತ್ ರೆಸ್ಪಾನ್ಸ್ ಸಿಗುತ್ತಿದ್ದು, ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನ ಹಾಗೂ ಅದ್ಭುತ ಸಂಗೀತಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಶಿವರಾಜ್‌ಕುಮಾರ್ ಅವರ ಎನರ್ಜಿ ಮತ್ತು ಸಿನಿಮಾದ ವಿಭಿನ್ನ ಕಥಾವಸ್ತು ಯುವಜನತೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ವೀಕೆಂಡ್‌ನಲ್ಲಿ ಮಾತ್ರವಲ್ಲದೆ ವಾರದ ದಿನಗಳಲ್ಲೂ ಕಲೆಕ್ಷನ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಮೂಲಕ 45 ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಸೇರಿದೆ.

ವಿಶೇಷವಾಗಿ ಶಿವಣ್ಣ, ಉಪ್ಪಿ ಮತ್ತು ರಾಜ್ ಬಿ. ಶೆಟ್ಟಿ ಅವರ ಕಾಂಬಿನೇಷನ್ ದೃಶ್ಯಗಳು ಅಭಿಮಾನಿಗಳಿಗೆ ಹಬ್ಬದಂತಿದೆ. ಒಟ್ಟಾರೆಯಾಗಿ, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿರುವ ’45’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳತ್ತ ದಾಪುಗಾಲು ಹಾಕುತ್ತಿದೆ.

ಇದನ್ನೂ ಓದಿ : ಕ್ರಿಸ್ಮಸ್ ರೇಸ್‌ನಲ್ಲಿ ಗೆದ್ದ ‘ಮಾರ್ಕ್’ – ಮೊದಲ ವಾರದಲ್ಲಿ 35 ಕೋಟಿ ರೂ. ಗಳಿಕೆ ಕಂಡ‌ ಕಿಚ್ಚನ ಸಿನಿಮಾ!

Btv Kannada
Author: Btv Kannada

Read More