ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭದಲ್ಲಿ, CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ₹2.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಡೇಪಾಳ್ಯ ಹಾಗೂ ಸೋಲದೇವನಹಳ್ಳಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೈಜೀರಿಯಾದ ಒಕೋಕೆ ಕ್ರಿಸ್ತಾಫಾರ್ ಮತ್ತು ತಮಿಳುನಾಡಿನ ನವೀನ್ ರಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಡೇಪಾಳ್ಯದ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ನವೀನ್ ರಾಜ್‌ನನ್ನು ಬಂಧಿಸಿರುವ CCB, 60 LSD ಪಿಲ್ಸ್ ಹಾಗೂ ₹2 ಲಕ್ಷ ನಗದು ಜಪ್ತಿ ಮಾಡಿದೆ. ಈತ ಡಾರ್ಕ್ ವೆಬ್ ಮೂಲಕ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದ.

ಸೋಲದೇವನಹಳ್ಳಿಯಲ್ಲಿ ನೈಜೀರಿಯಾದ ಒಕೋಕೆ ಕ್ರಿಸ್ತಾಫಾರ್‌ನನ್ನು ಬಂಧಿಸಿ, 1 ಕೆಜಿ 70 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಈತ ಸ್ನೇಹಿತರ ಮೂಲಕ ಮಾದಕ ವಸ್ತು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ. ನಗರದ ಐಟಿ-ಬಿಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಹೊಸ ವರ್ಷದ ಪಾರ್ಟಿಗಳಿಗಾಗಿ ದೊಡ್ಡ ಮಟ್ಟದ ಆರ್ಡರ್ ಪಡೆದಿರುವ ಶಂಕೆ ವ್ಯಕ್ತವಾಗಿದೆ.

ನೈಜೀರಿಯಾದ ಕ್ರಿಸ್ತಾಫಾರ್ ಈ ಹಿಂದೆಯೂ ಎರಡು ಬಾರಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ದಂಧೆ ಮುಂದುವರೆಸಿದ್ದ ಈತನನ್ನು ಈಗ ಜೈಲಿಗಟ್ಟಲಾಗಿದೆ.

ಇದನ್ನೂ ಓದಿ : ಗ್ರಾಹಕರ ಹೆಸರಲ್ಲಿ ಕೋಟಿ ಕೋಟಿ ಲೋನ್ ಪಡೆದು ಎಸ್ಕೇಪ್ – ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ದ FIR ದಾಖಲು!







