ಬೆಂಗಳೂರು : ಗ್ರಾಹಕರ ಹೆಸರಲ್ಲಿ ಬ್ಯಾಂಕ್ ಮ್ಯಾನೇಜರ್ ಲೋನ್ ತೆಗೆದುಕೊಂಡು ಎಸ್ಕೇಪ್ ಆಗಿರುವ ಘಟನೆ ಮಲ್ಲೇಶ್ವರಂ ಠಾಣೆ ವ್ಯಾಪ್ತಿಯಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ನಡೆದಿದೆ. ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ರಘು ಎಂಬಾತನ ವಿರುದ್ಧ ಸುಮಾರು 3ಕೋಟಿ ಲೋನ್ ಪಡೆದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

ಮ್ಯಾನೇಜರ್ ರಘು 21 ಜನ ಗ್ರಾಹಕರ ಹೆಸರಲ್ಲಿ ವಂಚನೆ ಮಾಡಿದ್ದು, ಗ್ರಾಹಕರನ್ನ ಸಂಪರ್ಕಿಸಿ ಲೋನ್ ಪಡೆದುಕೊಳ್ಳುವುದಾಗಿ ಮನವಿ ಮಾಡಿದ್ದಾರೆ. ಮನೆಯಲ್ಲಿ ಕಷ್ಟ ಇದೆ, ನಿಮ್ಮ ಹೆಸರಲ್ಲಿ ಲೋನ್ ತೆಗೆದುಕೊಳ್ತೇನೆ ಎಂದು ಮ್ಯಾನೇಜರ್ ರಘು ಹೇಳಿದ್ದ. ನನ್ನ ಬಳಿ ಗೋಲ್ಡ್ ಇದೆ, ಅದನ್ನ ಇಟ್ಟು ಲೋನ್ ತೆಗೆದುಕೊಳ್ತೀನಿ. ಫ್ಯಾಮಿಲಿ ಸಮಸ್ಯೆಯಾಗಿದೆ ಎಂದು ಹೇಳಿ ಗ್ರಾಹಕರನ್ನ ನಂಬಿಸಿದ್ದ.

ಹಾಗೆಯೇ ಕೆಲವರಿಂದ ಸಹಿ ಪಡೆದು ಲೋನ್ ತೆಗೆದುಕೊಂಡು ರಘು ಎಸ್ಕೇಪ್ ಆಗಿದ್ದಾನೆ. ಗೋಲ್ಡ್ ಇಡದೆ ಗ್ರಾಹಕರ ಸಹಿಗಳನ್ನು ಪಡೆದು, ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು 3 ಕೋಟಿಗೂ ಅಧಿಕ ಹಣ ವಂಚನೆ ವಂಚಿಸಿದ್ದಾನೆ.



ಇದನ್ನೂ ಓದಿ : “ಆಲ್ಫಾ #men love vengeance” ಚಿತ್ರದ ಫಸ್ಟ್ ಸಾಂಗ್ ರಿಲೀಸ್ – ಫೆ.20ಕ್ಕೆ ಸಿನಿಮಾ ತೆರೆಗೆ!







